ಸದಸ್ಯತ್ವ

ಕೂಟ ಬ್ರಾಹ್ಮಣರು ಹಲವಾರು ಕಾರ್ಯೋಕ್ತಿಗಳನ್ನು ಹೊಂದಿರುವ / ಕಾರ್ಯೋಕ್ತಿಗಳಲ್ಲಿ ತೊಡಗಿಸಿಕೊಂಡಿರುವ ವಿಶಿಷ್ಟ ಸಮುದಾಯ.
ನಮ್ಮ ಸಮುದಾಯದವರು ಮುಖ್ಯವಾಗಿ ಕೃಷಿ, ಹೋಟೆಲ್ ಉದ್ಯಮ, ಶಿಕ್ಷಕ ವೃತ್ತಿ,  ಬ್ಯಾಂಕ್ ಉದ್ಯಮ, ಕೈಗಾರಿಕೋದ್ಯಮ,  ಕಟ್ಟಡ ನಿರ್ಮಾಣ,  ವೈದ್ಯಕೀಯ, ಮಾಹಿತಿ ತಂತ್ರಜ್ಞಾನ, ವಕೀಲಿ, ಪತ್ರಿಕೋದ್ಯಮ ವೃತ್ತಿಯಲ್ಲಿ ತೊಡಗಿಸಿಕೊಂಡಿರುತ್ತಾರೆ.
 
ಪ್ರವೃತ್ತಿಯಲ್ಲಿ ಕಲೆ, ಸಾಹಿತ್ಯ ,ಯಕ್ಷಗಾನ,  ನಾಟಕ ರಂಗಗಳಲ್ಲೂ ತೊಡಗಿಸಿಕೊಂಡಿರುತ್ತಾರೆ.
 
ಕೋಟ ಬ್ರಾಹ್ಮಣ ಕುಲದಲ್ಲಿ ಜನಿಸಿದ ಯಾರೂ ಕೂಡ ಕೂಟ ಮಹಾಜಗತ್ತಿನ  ಸದಸ್ಯರಾಗಲು ಅರ್ಹರು.
 
ಹೆಚ್ಚು ಹೆಚ್ಚು ಸದಸ್ಯರಾಗುವುದರೊಂದಿಗೆ ನಮ್ಮ ಸಮಾಜವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಬಹುದು ಹಾಗೂ ಸದಸ್ಯರಾಗುವುದರಿಂದ  ಕೂಟ ಮಹಾಜಗತ್ತು ಏರ್ಪಡಿಸುವ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮನೋಭಾವ ಇರುತ್ತದೆ. ಇದರಿಂದ ಪರಸ್ಪರ ಪರಿಚಯವಾಗುವುದರೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಯಾಗುವುದರೊಂದಿಗೆ ಇವ ನಮ್ಮವ,  ಅವ ನಮ್ಮವ ಎನ್ನುವ ಮನೋಭಾವ ದೊಂದಿಗೆ ಬೆರೆತು ಕೂಟ ಸಮಾಜದಲ್ಲಿಯೇ (ನಮ್ಮ ನಮ್ಮಲ್ಲಿಯೇ) ವಿವಾಹ ಸಂಬಂಧವನ್ನು ಬೆಳೆಸಿ ನಮ್ಮ  ಬಂದುತ್ವವನ್ನು ಇನ್ನೂ ಎತ್ತರಕ್ಕೆ ಬೆಳೆಸಬಹುದು ಹಾಗೂ ಬೇರೆಯವರ ಸಂಕಷ್ಟದ ಸಂದರ್ಭದಲ್ಲಿ ನೆರವಾಗುವುದರೊಂದಿಗೆ ಸಮಾಜದ ಸೇವೆಗೆ ಕಾರಣಕರ್ತರಾಗಬಹುದು.
 
ಹಲವಾರು ಉತ್ತಮ ಮನಸ್ಸು ಚಿಂತನೆ ವಿಡಂಬನೆ ಹಾಗೂ ಸಮ್ಮಿಲನವೇ ಯಾವುದೇ ಉತ್ತಮ ಸಮಾಜದ    ಶ್ರೀಯೊಭಿವೃದ್ಧಿಯ ದಾರಿ.
 

ಅ ) ಕೂಟ ಮಹಾಜನರ ಪ್ರತಿಯೊಂದು ಮನೆಯವರು ಜಗತ್ತಿನ ಸದಸ್ಯರಾಗಿ ಅದಕ್ಕೆ ವಂತಿಗೆಯನ್ನೂ ತಮ್ಮಲ್ಲಾಗುವ ಶುಭ ಶೋಭನ ಸಂಧರ್ಭಗಳಲ್ಲಿ ಗುರುಕಾಣಿಕೆಯನ್ನು ತಪ್ಪದೆ ಸಲ್ಲಿಸತಕ್ಕದ್ದು.

ಆ ) (i) ಕೂಟ ಮಹಾಜಗತ್ತಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೂಟ ಬ್ರಾಹ್ಮಣ ಸಮಾಜದ ಯಾವುದೇ ವ್ಯಕ್ತಿಯು ಕೂಟ ಮಹಾಜಗತ್ತಿನ ಸದಸ್ಯನಾಗಿರತಕ್ಕದ್ದು. ಸದಸ್ಯನಾಗುವ ವ್ಯಕ್ತಿಯು ನಿರ್ಧಾರಿತ ನಮೂನೆಯ ಆರ್ಜಿಯನ್ನು ತ್ರಿಪ್ರತಿಗಳಲ್ಲಿ ರೂ 25.00 ಶುಲ್ಕದೊಂದಿಗೆ ಸಲ್ಲಿಸಿ ತನ್ನ ಮನೆಯನ್ನು ನೊಂದಯಿಸಿಕೊಳ್ಳತಕ್ಕದ್ದು. ಹಾಗೆ ನೋಂದಾವಣೆಯಾದ ಮನೆಯವನ ಪ್ರಾಯ 18 ವರ್ಷ ಮಿರಿರತಕ್ಕ್ಕದ್ದು ಹಾಗೂ ಸದಸ್ಯರಾಗಿ ಸೇರಿಕೊಂಡ ಅವಿವಾಹಿತ ಮಹಿಳೆಯರು ಮುಂದಿನ ದಿನಗಳಲ್ಲಿ ಕೂಟೇತರನ್ನು ವಿವಾಹವಾದಲ್ಲಿ ನಿಭಂದನೆ 3 ರಂತೆ ಜತೆ ಸದಸ್ಯರಾಗಿ ಮುಂದುವರಿಯುತ್ತಾರೆ.

ಸದಸ್ಯತ್ವವನ್ನು (1) ಸಾಮಾನ್ಯ ಸದಸ್ಯ (2) ಆಜೀವ ಸದಸ್ಯ (3) ಪೋಷಕ ಸದಸ್ಯ ಎಂದು ಮೂರು ವಿಧವಾಗಿ ವಿಂಗಡಿಸಲಾಗಿದೆ.

(ii) ಸಾಮಾನ್ಯ ಸದಸ್ಯ: ವರ್ಷಂಪ್ರತಿ ರೂ 15/- ನ್ನು ಸದಸ್ಯ ಶುಲ್ಕವಾಗಿ ಕೊಡುವ ಕೂಟ ಬ್ರಾಹ್ಮಣ ಸಮಾಜದ ಪ್ರಾಯಸ್ಥರಾದ ವ್ಯಕ್ತಿಗಳು ಜಗತ್ತಿಗೆ ಒಂದು ವರ್ಷದ ಅವಧಿಯ ಸಾಮಾನ್ಯ ಸದಸ್ಯರಾಗಿರುತ್ತಾರೆ.

(iii) ಆಜೀವ ಸದಸ್ಯ: ರೂ 250 /- ನ್ನು ಸದಸ್ಯ ಶುಲ್ಕವನ್ನಾಗಿ ಕೊಡುವ ಕೂಟ ಬ್ರಾಹ್ಮಣ ಸಮಾಜದ ಪ್ರಾಯಸ್ಥರಾದ ವ್ಯಕ್ತಿಗಳು ಜಗತ್ತಿನ ಆಜೀವ ಸದಸ್ಯರಾಗಿರುತ್ತಾರೆ.

(iv) ಪೋಷಕ ಸದಸ್ಯ: ರೂ. 5,000/- ವನ್ನು ಸದಸ್ಯ ಶುಲ್ಕವಾಗಿ ಕೊಡುವ ಕೂಟ ಬ್ರಾಹ್ಮಣ ಸಮಾಜದ ಯಾವುದೇ ವ್ಯಕ್ತಿಗಳು ಕೂಟ ಪೋಷಕ ಸದಸ್ಯರಾಗಿರುತ್ತಾರೆ.

ಇ) (i) ಸದಸ್ಯ ಶುಲ್ಕವನ್ನು ಅಂಗಸಂಸ್ಥೆಯ ವಸೂಲಿ ಕೇಂದ್ರಗಳಿದ್ದಲ್ಲಿ ಅವುಗಳ ಮೂಲಕವಾಗಿ ಕೊಡತಕ್ಕದ್ದು. ಅಂಗ ಸಂಸ್ಥೆಯ ವಸೂಲಿ ಕೇಂದ್ರಗಳಿಲ್ಲದ ಪ್ರದೇಶಗಳಲ್ಲಿನ ವ್ಯಕ್ತಿಗಳು ಜಗತ್ತಿನ ಪ್ರದಾನ ಕಾರ್ಯದರ್ಶಿಯವರಿಗೆ ನೇರವಾಗಿ ಮನೆ ನೋಂದಣಿ ಅರ್ಜಿ ಹಾಗೂ ಸದಸ್ಯತ್ವ ಶುಲ್ಕ ಕಳುಹಿಸಿ ಸದಸ್ಯರಾಗಬಹುದು. ಜಗತ್ತಿನ ಓರ್ವ ಸದಸ್ಯನು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಅಂಗ ಸಂಸ್ಥೆಯ ಸದಸ್ಯರಾಗಿರಲು ಅವಕಾಶವಿರುವುದಿಲ್ಲ. ಅಲ್ಲದೆ ವಸೂಲಿಕೇಂದ್ರಗಳನ್ನೇ ಆಯಾ ಕೇಂದ್ರಗಳ ಬಹುಮತದ ನಿರ್ಧಾರದಂತೆ ಸಮೀಪದ ಅಂಗಸಂಸ್ಥೆಯ ಸದಸ್ಯರಾದವರೆಂದು ಪರಿಗಣಿಸಲಾಗುವುದು.

(ii) ನೊಂದಾಯಿತ ಮನೆಯ ಒಂದಕ್ಕಿಂತ ಹೆಚ್ಚಿನ ವ್ಯಕ್ತಿಗಳು ಜಗತ್ತಿನ ಸದಸ್ಯರಾಗಬಹುದು.

(iii) ಜಗತ್ತಿನ ಸದಸ್ಯರು ಅಂಗಸಂಸ್ಥೆಯ ಸದಸ್ಯರು ಆಗಿರುತ್ತಾರೆ. ಅದಕ್ಕಾಗಿ ಪ್ರತ್ಯೇಕ ಸದಸ್ಯ ಶುಲ್ಕ ಕೊಡಬೇಕಾಗಿಲ್ಲ.

(iv) ಆಜೀವ ಯಾ ಪೋಷಕ ಸದಸ್ಯರು ತಮ್ಮ ಉದ್ಯೋಗ ನಿಮಿತ್ತ ಅವರು ಸದಸ್ಯರಾದ ಅಂಗಸಂಸ್ಥೆಯ ಕ್ಷೇತ್ರದಿಂದ ಬೇರೆ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಬೇಕಾದ ಸಂದರ್ಭದಲ್ಲಿ ಅವರ ಸದಸ್ಯತನವನ್ನು ಆಯಾ ಅಂಗಸಂಸ್ಥೆಗೆ ವರ್ಗಯಿಸಿಕೊಳ್ಳಬಹುದು.

3. ಜತೆ ಸದಸ್ಯರು:

ಜಗತ್ತಿನ ಕೂಟ ಬ್ರಾಹ್ಮಣ ವರ್ಗದವರ ದೇವಸ್ಥಾನಗಳಲ್ಲಿ ಅರ್ಚಕರಾಗಿರುವ ಮತ್ತು ಅವರ ಮನೆಗಳಲ್ಲಿ ಪೌರೋಹಿತ್ಯ ನಡೆಸುತ್ತಿರುವ ಇತರ ಸ್ಮಾರ್ತ ಬ್ರಾಹ್ಮಣ ವರ್ಗದವರು ವರ್ಷಂಪ್ರತಿ ರೂ 10/- ನ್ನು ಸದಸ್ಯ ಶುಲ್ಕವಾಗಿ ಕೊಟ್ಟು ಜಗತ್ತಿನ ಸಾಮಾನ್ಯ ಸದಸ್ಯರಾಗಬಹುದು. ಅಂತಹ ಸದಸ್ಯರನ್ನೇ ಜತೆ ಸದಸ್ಯರೆಂದು ಕರೆಯಲಾಗುವುದು.

ಈ ವರ್ಗದಂತೆ ಸದಸ್ಯರಾದ ಜತೆ ಸದಸ್ಯರಿಗೆ ಜಗತ್ತಿನ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಧಿಕಾರವಿರುತ್ತದೆ. ಆದರೆ ಅವರಿಗೆ ಜಗತ್ತಿನ ಯಾ ಜಗತ್ತಿನ ಅಂಗ ಸಂಸ್ಥೆಗಳ ಯಾವುದೇ ಕಾರ್ಯಕಾರಿ ಸಮಿತಿ ಸದಸ್ಯರಾಗುವ ಮತ್ತು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಗೆ ಆಯ್ಕೆಯಾಗುವ ಹಕ್ಕು ಹಾಗೂ ತತ್ಸಂಭಂದವಾದ ಮತದಾನದ ಹಕ್ಕು ಇರುವುದಿಲ್ಲ. ಪರಂತು ಜಗತ್ತಿನ ಇತರ ಕಾರ್ಯಕ್ರಮಗಳಲ್ಲಿ ಮತ ನೀಡುವ ಹಕ್ಕು ಇರುವುದು.

4. ಪೋಷಕರು:

ಜಗತ್ತಿಗೆ ಸೇರದ ಇತರ ಜನರೂ ಜಗತ್ತಿಗೆ ವಂತಿಗೆ ವರಾಂಡಗಳನ್ನೇ ಕೊಟ್ಟು ತಮ್ಮ ಸಹಾನುಭೂತಿಯನ್ನು ತೋರಿಸಬಹುದು. ಆದರೆ ಅವರಿಗೆ ಜಗತ್ತಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಥವಾ ಮತ ನೀಡುವ ಹಕ್ಕು ಇಲ್ಲ.

5. ಇತರರನ್ನು ಜಗತ್ತಿಗೆ ಸೇರಿಸುವ ಕ್ರಮ:

ಇತರ ಬ್ರಾಹ್ಮಣ ತಂಡದವರನ್ನ ಜಗತ್ತಿಗೆ ಸೇರಿಸಿಕೊಳ್ಳುವ ಹಕ್ಕು ಮಹಾಸಭೆಗೆ ಇರುತ್ತದೆ. ಹಾಗೆ ಸೇರಿಕೊಳ್ಲಲಕ್ಷಿಸುವವರು ಜಗತ್ತಿನ ಸ್ಮರ್ತರಾ ಸಂಪ್ರದಾಯವನ್ನನುಸರಿಸಿ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವರನ್ನ ಗುರುವಾಗಿ ಒಪ್ಪಿಕೊಳ್ಳಬೇಕು. ಸೇರಿಸಿಕೊಳ್ಳಲಪೇಕ್ಷಿಸುವವರು ಜಗತ್ತಿನ ಸ್ಮಾರ್ಥ ಸಂಪ್ರದಾಯವನ್ನುಸರಿಸಿ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವರನ್ನ ಗುರುವಾಗಿ ಒಪ್ಪಿಕೊಳ್ಳಬೇಕು. ಸೇರಿಸಿಕೊಳ್ಳಲಪೇಕ್ಷಿಸುವರು ಲಿಖಿತ ಮನವಿ ಮಾಡಿಕೊಂಡಲ್ಲಿ ಆ ಕುರಿತು ಕಾರ್ಯಕಾರಿ ಸಮಿತಿಯು ಮುಕ್ತವಾದ ಒಂದು ವಿಶೇಷ ವಿಚಾರ ಸಮಿತಿಯ ಮೂಲಕ ವಿಚಾರಿಸಿ ಅದರ ಶಿಫಾರಸ್ಸನ್ನು ಮಹಾಸಭೆಯ ಮುಂದಿಡಬೇಕು. ಅದನ್ನು ಪರ್ಯಾಲೋಚಿಸಿ ಮಹಾಸಭೆಯ ತನ್ನ ತೀರ್ಮಾನವನ್ನ ಕೊಡತಕ್ಕದ್ದು. ಮಹಾಸಭೆಯು ಅವರನ್ನು ಜಗತ್ತಿಗೆ ಸೇರಿಸಿಕೊಳ್ಳುವರೆ ತೀರ್ಮಾನವಿತ್ತಲ್ಲಿ ಅಂಥವರನ್ನ ಜತೆ ಸದಸ್ಯರನ್ನಾಗಿ ಮಾತ್ರ ಸೇರಿಸಿಕೊಳ್ಳಬೇಕು.