Ducimus perferendis, tempore. Incidunt. Minim hendrerit provident condimentum diam? Itaque, sequi sunt repellat praesentium ipsum eros scelerisque iaculis! Recusandae recusandae etiam.
ಕೂಟ ಮಹಾ ಜಗತ್ತು ಸಾಲಿಗ್ರಾಮ (ರಿ) ಬೆಂಗಳೂರು ಅಂಗ ಸಂಸ್ಥೆಗೆ, ಶ್ರೀ ಪಿ. ಸುರೇಶ ಹಂದೆಯವರು ತಮ್ಮ ಮಾತೃಶ್ರಿ ದಿ|ನಾಗವೇಣಿಯಮ್ಮನವರ ಸ್ಮರಣಾರ್ಥವಾಗಿ ಬೆಂಗಳೂರಿನ ವಸಂತಪುರದಲ್ಲಿ ತಮ್ಮ ಧರ್ಮಪತ್ನಿ ಶ್ರೀಮತಿ ಆಶಾ. ಎಸ್. ಹಂದೆಯವರ ಹೆಸರಿನಲ್ಲಿರುವ 2240 ಚ.ಅಡಿ.ವಿಸ್ತೀರ್ಣದ ನಿವೇಶನವನ್ನು ಮಕ್ಕಳಾದ ಕು| ಶುಭಾ, ಕು| ಸಂಗೀತ ಹಾಗೂ ಚಿ| ಸುಮಂತ ಮತ್ತು ಪತ್ನಿ ಸಮೇತರಾಗಿ ನಮ್ಮ ಸಮಾಜದ ಸಂಸ್ಥೆಗೆ ಭೂದಾನವಾಗಿ ನೀಡಿರುತ್ತಾರೆ. ಆನಂತರ ದಿ| 28-02-13 ರಂದು ಭೂದಾನ ಪತ್ರವನ್ನು ಧಾನಿಗಳಿಂದ ಬೆಂಗಳೂರು ಅಂಗ ಸಂಸ್ಥೆಯ ಹೆಸರಿಗೆ ನೊಂದಾಯಿಸಿಕೊಳ್ಳಲಾಗಿದೆ.

ಮೇಲ್ಕಂಡ ಸಂಸ್ಥೆಯು ಕೂಟ ಮಹಾ ಜಗತ್ತು ಸಾಲಿಗ್ರಾಮ (ರಿ) ಬೆಂಗಳೂರು ಅಂಗ ಸಂಸ್ಥೆಗೆ, ಕಚೇರಿಯೇ ಇಲ್ಲದ ಸಮಯದಲ್ಲಿ, 1987 ರಿಂದ 2000 ನೇ ಇಸವಿವರಗೆ ಸುಮಾರು 14 ವರ್ಷಗಳ ಕಾಲ ಅಂಗ ಸಂಸ್ಥೆಯ ಕಚೇರಿಗೆ ಸ್ಥಳಾವಕಾಶ ನೀಡಿದಲ್ಲದೆ ಬಹಳಷ್ಟು ಸಹಕರವನ್ನೇ ನೀಡಿರುತ್ತಾರೆ. ಆ ಸಮಯದ ಸಂಸ್ಥೆಯ ಆಡಳಿತ ಮಂಡಳಿಯವರಿಗೆ ಬೆಂಗಳೂರು ಅಂಗ ಸಂಸ್ಥೆಯು ತುಂಬು ಹೃದಯದ ಕೃತಜ್ಞತೆ ಸಲ್ಲಿಸುತ್ತದೆ. ಅಲ್ಲದೆ ಸಂಸ್ಥೆಯ ಕಾರ್ಯಕ್ರಮಗಳಿಗೆ ಕಲ್ಯಾಣ ಮಂದಿರವನ್ನೇ ಉಚಿತವಾಗಿ ನೀಡುತ್ತಿರುವ ಹಾಲಿ ಕಾರ್ಯಕಾರಿ ಮಂಡಳಿಯವರಿಗೆ ತುಂಬು ಹೃದಯದ ಧನ್ಯವಾದಗಳು.
ಕೂಟ ಮಹಾ ಜಗತ್ತು ಸಾಲಿಗ್ರಾಮ (ರಿ) ಬೆಂಗಳೂರು ಅಂಗ ಸಂಸ್ಥೆಯ ಕಛೇರಿಗೆ ಶ್ರೀ. ಕೆ. ಶ್ರೀಧರ ಮಯ್ಯರು ಮತ್ತು ಮಾಲಿನಿ.ಎಸ್.ಮಯ್ಯರವರು ನೆಲಮಾಳಿಗೆಯಲ್ಲಿ ಉಚಿತವಾಗಿ ಸ್ಥಳಾವಕಾಶವನ್ನು ನೀಡುತ್ತೇನೆಂದು ಆಶ್ವಾಸನೆ ನೀಡಿರುತ್ತಾರೆ. ಶ್ರೀ ಗುರುನರಸಿಂಹ ದೇವರು ಶ್ರೀಯುತರನ್ನು ಹರಸಲೆಂದು ನಾವು ಆಶಿಸುತ್ತೇವೆ. ಶ್ರೀ. ಕೆ. ಶ್ರೀಧರ ಮಯ್ಯರು ಕೂಟ ಸಮಾಜದ ಅಭಿವೃಧಿಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.
ಈ ಹಿಂದೆಯೂ ಕೂಡ ಕೂಟ ಮಹಾ ಜಗತ್ತು ಸಾಲಿಗ್ರಾಮ (ರಿ) ಬೆಂಗಳೂರು ಅಂಗ ಸಂಸ್ಥೆಯ ಕಛೇರಿಗೆ ಶ್ರೀ.ಕೆ.ವೆಂಕಟರಮಣ ಮಯ್ಯರು ಮತ್ತು ಶ್ರೀ. ಕೆ. ಶ್ರೀಧರ ಮಯ್ಯರು ತಮ್ಮ ” ಮಯ್ಯ ಮಿನಿ ಹಾಲ್” ನಲ್ಲಿ ಸ್ಥಳವನ್ನು ಕಲ್ಪಿಸಿಕೊಟ್ಟಿದರು. ಕಾರಣಾಂತರದಿಂದ ಅಂಗ ಸಂಸ್ಥೆಯ ತನ್ನ ಕಛೇರಿಯನ್ನು ಸ್ಥಳಾಂತರಿಸಿತು.

ಶ್ರೀ ಎ.ವಿ. ಶ್ರೀಧರ ಕಾರಂತರು ಮತ್ತು ಸಹೋದರರು ಕೂಟ ಮಹಾ ಜಗತ್ತು ಸಾಲಿಗ್ರಾಮ ಅಂಗ ಸಂಸ್ಥೆಯ ಕಛೇರಿಗೆ ಶ್ರೀ ಎ.ಪಿ. ವೈಕುಂಠ ಕಾರಂತರು ಮತ್ತು ಮಕ್ಕಳು ತಮ್ಮ ಕಟ್ಟಡದಲ್ಲಿ ಸುಮಾರು ಎಂಟು ವರ್ಷಗಳಿಂದ ಸ್ಥಳಾವಕಾಶ ಮಾಡಿ ಕೊಟ್ಟಿದ್ದರು. ದಿ| ಶ್ರೀ ಎ.ಪಿ.. ವೈಕುಂಠ ಕಾರಂತರು ಈ ಹಿಂದೆ ಕೂಟ ಮಹಾಜಗತ್ತಿಗೆ ಸಲ್ಲಿಸಿದ ಆಪಾರ ಸೇವೆಯನ್ನು ಅವರ ಮಕ್ಕಳು ಮುಂದುವರಿಸಿಕೊಂಡು ಹೋಗುತ್ತಿರುವುದು ಗಮನಾರ್ಹ. ಮೇಲಿನ ಎಲ್ಲಾ ಮಹಾನಿಯರುಗಳು ಯಾವ ಪ್ರತಿಫಲ ಹಾಗೂ ಪ್ರಚಾರದ ಅಪೇಕ್ಷೆಗಳನ್ನು ಬಯಸದೆ ತುಂಬು ಹೃದಯದಿಂದ ನಿವೇಶನ ಹಾಗೂ ಕಛೇರಿಗೆ ಸ್ಥಳವನ್ನು ಕೂಟ ಮಹಾ ಜಗತ್ತು ಸಾಲಿಗ್ರಾಮ (ರಿ) ಬೆಂಗಳೂರು ಅಂಗ ಸಂಸ್ಥೆಯ ಅಭಿವೃದ್ದಿಗೆ ಉಚಿತವಾಗಿ ಕೊಟ್ಟಿರುತ್ತಾರೆ. ಈ ಕೊಡುಗೆಯು ಇಂದಿನ ಯುವ ಪೀಳಿಗೆಗೆ ಮಾದರಿಯಾಗಲಿ ಎಂದು ಆಶಿಸುತ್ತೇವೆ.
