ಸಂಸ್ಥೆಯು ನಡೆದು ಬಂದ ದಾರಿ

ಕೂಟ ಮಹಾ ಜಗತ್ತು, ಸಾಲಿಗ್ರಾಮ – ಬೆಂಗಳೂರು ಅಂಗಸಂಸ್ಥೆ (ರಿ)  1953 ರಲ್ಲಿ ಪ್ರಾರಂಭವಾಯಿತು. ಶ್ರೀ ಶೇಷಪ್ಪ ಹೊಳ್ಳರು ಇದರ ಸ್ಥಾಪಕ ಅಧ್ಯಕ್ಷರಾಗಿದ್ದರು. ಆಗಿನ ಇತರ ಸದಸ್ಯರೆಂದರೆ ಶ್ರೀಯುತರಾದ ಶ್ರೀನಿವಾಸ ರಾಯರು, ಕೆ ಅರ್ ನಾಗಪ್ಪ ಹೇರ್ಳೆರವರು, ಪಿ ನಾರಾಯಣ ಹೆಬ್ಬಾರರು, ಕಟೀಲ್ ಗಣಪತಿ ಶರ್ಮಾ, ಪಿ ನಾಗಪಯ್ಯನವರು, ಎಂ ಕಾಳಿಂಗ ಕಾರಂತರು, ಹಾರೋಹಳ್ಳಿ ರಾಮ ದೇವ ಹೊಳ್ಳರು, ಹಾಗೂ ಎಂ ಎ ಪರಮೇಶ್ವರ ಉರಾಳರು, .

ಈ ಅಂಗಸಂಸ್ಥೆಯನ್ನು ಪ್ರಾರಂಭಿಸುವುದಕ್ಕೆ ಇವರುಗಳ ಮುಖ್ಯ ಉದ್ದೇಶ /ಅಭಿಲಾಷೆಯು ನಮ್ಮ ಮೂಲ ಸಂಸ್ಥೆಯ ಉದ್ದೇಶಗಳಾದ ಜಗತ್ತಿನ ಮಹಾಜನರ ದಾರ್ಮಿಕ, ಸಾಮಾಜಿಕ, ಹಾಗು ನೈತಿಕ ಉನ್ನತಿಗಾಗಿ ಪ್ರಯತ್ನಿಸುವುದು, ಮತ್ತು ಅವರಲ್ಲಿ ಧಾರ್ಮಿಕ ಶ್ರದ್ಧೆಯನ್ನು ಹೆಚ್ಚಿಸುವುದು, ಗುರು ದೇವಸ್ಥಾನದ ಅಭಿವೃದ್ದಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುವುದು, ಆ ಕಾರ್ಯಗಳ ಸಾಧನೆಗೆ ಬೇಕಾದ ಅರ್ಥಿಕ ಸಹಾಯವನ್ನು ಭಕ್ತ ಮಹಾ ಜನರಿಂದ ಸಂಗ್ರಹಿಸುವುದು, ಗುರುದೇವರ ಭಕ್ತರಲ್ಲಿ ನಡೆಯುವ ಮಂಗಳ ಕಾರ್ಯಗಳಲ್ಲಿ ಗುರು ಕಾಣಿಕೆಯನ್ನು ಅರ್ಪಿಸುವುದರ ಮೂಲಕ ಗುರು ದೇವರನ್ನು ಪ್ರಾರ್ಥಿಸುವಂತೆ ಪ್ರೇರೇಪಿಸುವುದು, ಮಹಾಜನರ ಸಾಂಸ್ಕೃತಿಕ ಅಭಿವೃದ್ಹಿಗಾಗಿ ವಿಧ್ಯಾರ್ಥಿ ನಿಲಯ ಹಾಗೂ ಕಲ್ಯಾಣ ಮಂಟಪ ಮುಂತಾದ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸುವುದು ಇತ್ಯಾದಿ.

ಸಂಸ್ಥಯ ಕಛೇರಿ

ಅಂಗಸಂಸ್ಥೆಯು ಪ್ರಾರಂಭವಾದ ದಿನದಿಂದ 1961-62 ನೇ ಇಸವಿಯವರೆಗೆ ಸಂಸ್ಥೆಯ ಕಾರ್ಯಾಲಯವು ಈಸ್ಟ್ರನ್ ಲಂಚ್ ಹೋಂ ನಲ್ಲಿ ನಡೆಯುತ್ತಿತ್ತು. ದಿ. ಶ್ರೀ ಪಿ ನಾರಾಯಣ ಹೆಬ್ಬಾರರ ಮಾಲೀಕತ್ವದ ಈಸ್ಟ್ರನ್ ಲಂಚ್ ಹೋಂ ನಲ್ಲಿ ನಡೆಯುತ್ತಿತ್ತು. ಕಾರ್ಯನಿರ್ವಾಹಕ ಸಮಿತಿಯ ಪ್ರತಿಯೊಂದು ಸಭೆಗಳು ನಡೆಯುವ ಸಂದರ್ಭದಲ್ಲಿ ಉಪಾಹಾರವನ್ನು ನೀಡುವುದರೊಂದಿಗೆ, ಅವಶ್ಯಕವಾದ ಸಕಲ ಸೌಕರ್ಯಗಳನ್ನು ಒದಗಿಸಿದ್ದರು.

1962 ನೇ ಇಸವಿಯಲ್ಲಿ ಅಂಗಸಂಸ್ಥೆಯ ಕಛೇರಿಯನ್ನು ಶ್ರೀ ಹೆಚ್.ಜೆ ಆನಂದರಾಮ ಹೊಳ್ಳರ ಮಾಲೀಕತ್ವದ ಬಳೆಪೇಟೆಯಲ್ಲಿರುವ ಉಡುಪಿ ಶ್ರೀ ಕೃಷ್ಣ ಭವನಕ್ಕೆ ಸ್ಥಳಾಂತರಿಸಲಾಯಿತು.

1973 ನೇ ಇಸವಿಯಲ್ಲಿ ಅಂಗಸಂಸ್ಥೆಯ ಕಛೇರಿಯನ್ನು ದಿ|| ನಾಗಪ್ಪ ಬಾಯರಿಯವರ ಮನೆಯ ಮುಂಭಾಗದಲ್ಲಿರುವ ಕೋಣೆಗೆ ಸ್ಥಳಾಂತರಿಸಲಾಯಿತು.

1983 ನೇ ಇಸವಿಯಲ್ಲಿ, ಅಂಗಸಂಸ್ಥೆಯ ಕಛೇರಿಯನ್ನು ಎಲ್ಲಾ ಸಾಮಾನುಗಳೊಂದಿಗೆ ಬುಲ್ ಟೆಂಪಲ್ ರಸ್ತೆಯಲ್ಲಿರುವ ಶ್ರೀ ಗುರುನರಸಿಂಹ ಕಲ್ಯಾಣ ಮಂದಿರದ ಒಂದು ಕೊಠಡಿಗೆ ಸ್ಥಳಾಂತರಿಸಲಾಯಿತು. (ದಿನಾಂಕ 02-08-1986 ರಂದು ನಡೆದ ಕಾರ್ಯಕಾರಿ ಸಭೆಯ ಮಾಹಿತಿ).

2001 ನೇ ಇಸವಿಯಲ್ಲಿ, ಅಂಗಸಂಸ್ಥೆಯ ಕಛೇರಿಯನ್ನು ಶ್ರೀ ಕೆ ವೆಂಕಟರಮಣ ಮಯ್ಯ ಮತ್ತು ಸಹೋದರರ ಮಾಲಿಕತ್ವದ ಹನುಮಂತ ನಗರ, ಮಾರುತಿ ವೃತ್ತದಲ್ಲಿರುವ ಶ್ರೀ ವೆಂಕಟರಮಣ ಮಯ್ಯ ಮಿನಿ ಹಾಲ್ ಗೆ ಸ್ಥಳಾಂತರಿಸಲಾಯಿತು. 2005 ನೇ ಇಸವಿಯಲ್ಲಿ, ಸಂಸ್ಥೆಯ ಕಛೇರಿಯನ್ನು ದಿ|| ಎ. ಪಿ ವೈಕುಂಠ ಕಾರಂತರ ಧರ್ಮ ಪತ್ನಿ ಶ್ರೀಮತಿ ಕಾವೇರಮ್ಮ ಮತ್ತು ಮಕ್ಕಳ ಮಾಲಿಕತ್ವದ ಗಾಂಧಿಬಜಾರ್ ಮುಖ್ಯ ರಸ್ತೆಯಲ್ಲಿರುವ ಕೋಣೆ ಸಂಖೆ 16, ನಂ 77, 2 ನೇ ಮಹಡಿ,’ಕಾವೇರಿ ನಿಲಯ’ಕ್ಕೆ ಸ್ಥಳಾಂತರಿಸಲಾಯಿತು.

ದಿನಾಂಕ 09-02-2014 ರಂದು ಶ್ರೀ ಕೆ ಶ್ರೀಧರ ಮಯ್ಯ ದಂಪತಿಗಳು ತಮ್ಮ ಕಟ್ಟಡದ ನೆಲಮಾಳಿಗೆಯಲ್ಲಿರುವ ಕೊಠಡಿಯನ್ನು ಅಂಗಸಂಸ್ಥೆಯ ಕಛೇರಿಗೆ ಅದರ ಕೀಲಿಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜೆ ಮಂಜುನಾಥ ಮಯ್ಯರಿಗೆ ಹಸ್ತಾಂತರಿಸಿದರು. ಅಂದಿನಿಂದ 2023 ರ ತನಕ ಅಂಗಸಂಸ್ಥೆಯು ತನ್ನ ಕಾರ್ಯ ಕಲಾಪವನ್ನು ಇಲ್ಲಿಯೇ ನೆಡೆಸಿತು.

2023 ರಿಂದ ಇಂದಿನ ವರೆಗೂ ಅಂಗಸಂಸ್ಥೆಯ ಕಾರ್ಯಾಲಯವು ಮತ್ತು ಕಾರ್ಯಕಾರಿ ಮಂಡಳಿಯ ಸಭೆಯು ಸಂಖ್ಯೆ 34, 1ನೇ ಮಹಡಿ, 3ನೇ ಮುಖ್ಯರಸ್ತೆ, 4ನೇ ಕ್ರಾಸ್, ಹನುಮಂತನಗರ, ಬೆಂಗಳೂರು 560019 ಸ್ಥಳದಲ್ಲಿಯೇ ನಡೆಯುತ್ತಿದೆ.

ಪದಾಧಿಕಾರಿಗಳು: ಕೂಟ ಮಹಾಜಗತ್ತು ಸಾಲಿಗ್ರಾಮ (ರೀ) ಬೆಂಗಳೂರು ಅಂಗಸಂಸ್ಥೆಗೆ ಪದಾಧಿಕಾರಿಗಳು/ಆಡಳಿತ ಮಂಡಳಿಗೆ 1996-97 ರ ವರೆಗೆ ಪ್ರತಿವರ್ಷವೂ ಸರ್ವಸದಸ್ಯರ ಸಭೆಯಲ್ಲಿ ಆಯ್ಕೆ ಮಾಡಲಾಗುತ್ತಿತ್ತು. ಪ್ರಾರಂಭದಿಂದ ಸುಮಾರು 1996 – 97 ವರೆಗೆ ಅಲ್ಲಲ್ಲಿ ದಾಖಲೆ ಇಲ್ಲದಿರುವುದರಿಂದ, ಈ ಅವಧಿಯಲ್ಲಿ ಪದಾಧಿಕಾರಿಗಳಾಗಿ ಈ ಕೆಳಕಂಡ ಮಹಾನಿಯರುಗಳು ಕಾರ್ಯನಿರ್ವಹಿಸಿದ್ದರು.

ಕೋಟ ವಾಸುದೇವ ಕಾರಂತರುಕೆ ಶ್ರೀನಿವಾಸ ರಾಯರುಶೇಷಪ್ಪ ಹೊಳ್ಳರು
ಕೆ ಆರ್ ನಾಗಪ್ಪ ಹೇರ್ಳೆರವರುಪಿ ನಾರಾಯಣ ಹೆಬ್ಬಾರ್ ರವರುಎಂ ಶ್ರೀನಿವಾಸ ಕಾರಂತರು
ಕಟೀಲ್ ಗಣಪತಿ ಶರ್ಮಾ ರವರುಗುಂಡ್ಮಿ ಯಜ್ಞೇಶ್ವರ ಉಪಾಧ್ಯರುಪಿ ಎನ್ ಉಪಾಧ್ಯರು
ಹೆಚ್ ಸೀತಾರಾಮ ಬಾಸ್ರಿ ರವರುಪಿ ಮಂಜುನಾಥ ಹೇರ್ಳೆರವರುಕೆ ಶ್ರೀಧರ ಎಸ್ ಹೊಳ್ಳರು
ಪಿ ಎಸ್ ಕೃಷ್ಣರಾವ್ ರವರುಪಿ ಕೆ ವಿಷ್ಣುಮೂರ್ತಿ ಐತಾಳರುಎಂ ಎಸ್ ವೆಂಕಟರಮಣ ಕಾರಂತರು
ಹೆಚ್ ಎಸ್ ರಾಮ ಕೃಷ್ಣಯ್ಯ ರವರುಹೆಚ್ ಶ್ರೀನಿವಾಸ ಕಾರಂತರುಎಂ ಎಸ್ ಚಂದ್ರಶೇಖರ ಉರಾಳರು
ಕೆ ಎಲ್ ಐತಾಳರು ಪಿ ಕೆ ಮದ್ಯಸ್ತರುಎಂ ಎಸ್ ಜನಾರ್ದನ ಕಾರಂತರುಚಂದ್ರಶೇಖರ ಹಂದೆರು
ಪಿ ಹರಿಕೃಷ್ಣ ಉಪಾಧ್ಯರುಪಿ ವೈ ಐತಾಳರುಕೆ ನೀಲಕಂಠ ಐತಾಳರು
ಎ ಪಿ ವೈಕುಂಠ ಕಾರಂತರುಎ ಎಸ್ ರಾಘವೇಂದ್ರ ಕಾರಂತರುಪಿ ಕೆ ರಾಜಾರಾಮ ಹೇರ್ಳೆ ರವರು
ಹೆಚ್ ಕೃಷ್ಣಮೂರ್ತಿ ಐತಾಳರುಶ್ರೀ ಕೃಷ್ಣ ಐತಾಳರು. ಮತ್ತುಪಿ ನಾಗಪ್ಪಯ್ಯ ಬಾಯರ್ರು

ಶ್ರೀ ಗುರುನರಸಿಂಹ ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ಸದಸ್ಯರು:

ಶ್ರೀಯುತರಾದ 1 ) ಶೇಷಪ್ಪ ಹೊಳ್ಳರು 2 ) ಕೆ ಆರ್ ನಾಗಪ್ಪ ಹೇರ್ಳೆರು ಮತ್ತು 3 ) ಪಿ ನಾಗಪ್ಪಯ್ಯ ಬಾಯರ್ರು.

1997 ರ ನಂತರ ಆಡಳಿತ ಮಂಡಳಿಗೆ 3 ವರ್ಷಕ್ಕೆ ಒಮ್ಮೆ ಆಡಳಿತ ಮಂಡಳಿಗೆ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.

1997 ರಿಂದ 2000 ರ ವರೆಗೆ ಈ ಕೆಳಕಂಡ ಮಹಾನಿಯರುಗಳು ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಪಿ ವೈ ಐತಾಳರುಅಧ್ಯಕ್ಷರು
ಕೆ ಎನ್ ರಾಘವೇಂದ್ರ ಹೇರ್ಳೆರುಉಪಾಧ್ಯಕ್ಷರು
ಎ ಎಸ್ ರಾಘವೇಂದ್ರ ಕಾರಂತರುಗೌ|| ಕಾರ್ಯದರ್ಶಿ
ಪಿ ಕೆ ರಾಜಾರಾಮ ಹೇರ್ಳೆರುಸಹ ಕಾರ್ಯದರ್ಶಿ
ಎ ಪಿ ವೈಕುಂಠ ಕಾರಂತರುಕೋಶಾಧಿಕಾರಿ (11 -06 -98 ರ ವರೆಗೆ )
ಜಿ ರತ್ನಾಕರ ಮಯ್ಯರು28 -06 -98 ರಿಂದ

2000 -2001 ರಿಂದ 2002 -2003 ರ ವರೆಗೆ ಆಯ್ಕೆ ಯಾದವರು

ಪದಾಧಿಕಾರಿಗಳು :

ಹೆಚ್ ಪರಮೇಶ್ವರ ಬಾಸ್ರಿಗಳುಅಧ್ಯಕ್ಷರು
ಜಿ ಎನ್ ಕೃಷ್ಣಮೂರ್ತಿ ನಾವಡರುಉಪಾಧ್ಯಕ್ಷರು
ಎಂ ಶ್ರೀನಿವಾಸ ಹೊಳ್ಳರುಗೌ || ಕಾರ್ಯದರ್ಶಿ
ಎಂ ಮಂಜುನಾಥ ಹೊಳ್ಳರುಸಹ ಕಾರ್ಯದರ್ಶಿ
ಎಂ ಸುಬ್ರಾಯ ಮಯ್ಯರುಕೋಶಾಧಿಕಾರಿ
ಎ ವಿ ವಿಶ್ವನಾಥ ಕಾರಂತರುಕೇಂದ್ರ ಸಂಸ್ಥೆ ಪ್ರತಿನಿಧಿ
ಜಿ ಮಂಜುನಾಥ ಮಯ್ಯರುಸಂಘಟನಾ ಕಾರ್ಯದರ್ಶಿ
ಕೆ ನಾಗರಾಜ ಕಾರಂತರುಬಾತ್ಮೀದಾರರು
ಕಾರ್ಯಕಾರಿ ಸಮಿತಿ ಸದಸ್ಯರು  
ಕೆ ಎನ್ ನರಸಿಂಹ ಕಾರಂತರುಬಿ ಎ ಪಿ ರಾವ್ಕೆ ವೈ ರಾಘವೇಂದ್ರ ಐತಾಳರು
ಕೆ ವೆಂಕಟರಮಣ ಮಯ್ಯರುಪಿ ಜಯಕರ ಉಪಾಧ್ಯರುಪಿ ಸತ್ಯನಾರಾಯಣ ಉಪಾಧ್ಯರು
ನಾಗೇಶ ಹೊಳ್ಳರು ಕೆಜಿ ಅನಂತಪದ್ಮನಾಭ ಉಪಾಧ್ಯರುಪಿ ಕೆ ರಾಜಾರಾಮ ಹೇರ್ಳೆರು
ಎಂ ಕೆ ಮಹಾಬಲ ಹೊಳ್ಳರು  

2003 – 2004 ರಿಂದ 2005 -2006 ರ ವರೆಗೆ ಆಯ್ಕೆಯಾದವರು

ಪದಾಧಿಕಾರಿಗಳು

ಜಿ ಮಂಜುನಾಥ ಮಯ್ಯರುಅಧ್ಯಕ್ಷರು
ಕೆ ವೆಂಕಟರಮಣ ಮಯ್ಯರುಉಪಾಧ್ಯಕ್ಷರು
ಎಂ ಮಂಜುನಾಥ ಹೊಳ್ಳರುಗೌ || ಕಾರ್ಯದರ್ಶಿ
ಕೆ ನಾಗರಾಜ ಕಾರಂತರುಸಹ ಕಾರ್ಯದರ್ಶಿ
ಕೆ ನಾಗೇಶ ಹೊಳ್ಳರುಕೋಶಾಧಿಕಾರಿ
ಹೆಚ್ ಪರಮೇಶ್ವರ ಬಾಸ್ರಿಗಳುಕೇಂದ್ರ ಸಂಸ್ಥೆ ಪ್ರತಿನಿಧಿ
ಕೆ ವೈ ರಾಘವೇಂದ್ರ ಐತಾಳರುಬಾತ್ಮೀದಾರರು
ಹೆಚ್ ಆರ್ ವೆಂಕಟ ಸುಬ್ಬರಾವ್ಸಂಘಟನಾ ಕಾರ್ಯದರ್ಶಿ

ಕಾರ್ಯಕಾರಿ ಸಮಿತಿ ಸದಸ್ಯರು

ಎಂ ಶ್ರೀನಿವಾಸ ಹೊಳ್ಳರುಪಿ ಕೆ ರಾಜಾರಾಮ ಹೇರ್ಳೆರುಪಿ ವೈ ಐತಾಳರು
ಕೆ ಎನ್ ನರಸಿಂಹ ಕಾರಂತರುಪಿ ಸತ್ಯನಾರಾಯಣ ಉಪಾಧ್ಯರುಕೆ ವಾಸುದೇವ ಮಧ್ಯಸ್ತರು
ಚಂದ್ರಶೇಕರ ಕಾರಂತರುಹೆಚ್ ಗೋಪಾಲ ಕೃಷ್ಣ ಐತಾಳರುಜಿ ಎನ್ ಕೃಷ್ಣ ಮೂರ್ತಿ ನಾವಡರು
ಹಾಗು ಎ ವಿ ಶ್ರೀಧರ ಕಾರಂತರು  

2006 – 2007 ರಿಂದ 2008 -2009 ಹಾಗೂ 2009 -2012 ರ ವರೆಗೆ ಆಯ್ಕೆಯಾದವರು

ಪದಾಧಿಕಾರಿಗಳು

ಶ್ರೀಯುತರಾದ ವಿ ಶ್ರೀಧರ ನಾವಡರುಅಧ್ಯಕ್ಷರು
ಕೆ ವೆಂಕಟರಮಣ ಮಯ್ಯರುಉಪಾಧ್ಯಕ್ಷರು
ಕೆ ನಾಗರಾಜ ಕಾರಂತರುಗೌ || ಕಾರ್ಯದರ್ಶಿ
ಕೆ ನಾಗೇಶ ಹೊಳ್ಳರುಕೋಶಾಧಿಕಾರಿ (10-08-20008ರ ವರೆಗೆ)
ಕೆ ಪಧ್ಮನಾಭ ನಾವಡರು11-08-2008 ರಿಂದ
ಎ ವಿ ಶ್ರೀಧರ ಕಾರಂತರುಸಹ ಕಾರ್ಯದರ್ಶಿ
ಕುಳಾಯಿ ವಾಸುದೇವ ಮಯ್ಯರುಸಂಘಟನಾ ಕಾರ್ಯದರ್ಶಿ
ಚಂದ್ರಶೇಖರ ಕಾರಂತರುಬಾತ್ಮೀದಾರರು

ಕಾರ್ಯಕಾರಿ ಮಂಡಳಿ ಸದಸ್ಯರು

ಎಂ ಕೆ ರಮೇಶ್ ಹೊಳ್ಳರುಎಂ ಮಂಜುನಾಥ ಹೊಳ್ಳರುಕೆ ಎನ್ ನರಸಿಂಹ ಕಾರಂತರು
ಹೆಚ್ ಗೋಪಾಲಕೃಷ್ಣ ಐತಾಳರುಕೆ ವೈ ರಾಘವೇಂದ್ರ ಐತಾಳರುಕೆ ವಾಸುದೇವ ಮಧ್ಯಸ್ತರು
ಹೆಚ್ ಪರಮೇಶ್ವರ ಬಾಸ್ರಿಗಳುಎಸ್ ರತ್ನಾಕರ ನಕ್ಷತ್ರಿಗಳುಎಂ ಸುಬ್ರಾಯ ಮಯ್ಯರು
ಕೆ ವೆಂಕಟರಮಣ ಕಾರಂತರುಪಿ ಸತ್ಯನಾರಾಯಣ ಉಪಾಧ್ಯರು (2007-10) 
ಕೆ ಪದ್ಮನಾಭ ನಾವಡರು (2007-10)ಕೆ ಸತ್ಯನಾರಾಯಣ ಉಪಾಧ್ಯರು (2009-12) 
ಪಿ ಜಯಕರ ಉಪಾಧ್ಯರು (2009-12)  

2012 – 2013 ರಿಂದ 2014 -2015 ರ ವರೆಗೆ ಆಯ್ಕೆಯಾದವರು

ಪದಾಧಿಕಾರಿಗಳು

ಶ್ರೀಯುತರಾದ ಜಿ ಮಂಜುನಾಥ ಮಯ್ಯಅಧ್ಯಕ್ಷರು
ಎ ವಿ ಶ್ರೀಧರ ಕಾರಂತರುಉಪಾಧ್ಯಕ್ಷರು
ಎ ಎಸ್ ರಾಘವೇಂದ್ರ ಕಾರಂತರುಗೌ || ಕಾರ್ಯದರ್ಶಿ
ಪಿ ಕೆ ರಾಜಾರಾಮ ಹೇರ್ಳೆರುಸಹ ಕಾರ್ಯ ದರ್ಶಿ
ಕೆ ನಾಗೇಶ್ ಹೊಳ್ಳರುಕೋಶಾಧಿಕಾರಿ
ಪಿ ಶಶಿಧರ ಉಪಾಧ್ಯಾಯರುಸಂಘಟನಾ ಕಾರ್ಯದರ್ಶಿ
ಕೆ ಶ್ರೀಧರ ಮಯ್ಯರುಕೇಂದ್ರ ಸಂಸ್ಥೆ ಪ್ರತಿನಿಧಿ
ಪಿ ಸತ್ಯನಾರಾಯಣ ಉಪಾಧ್ಯರುಬಾತ್ಮೀದಾರರು

ಕಾರ್ಯಕಾರಿ ಮಂಡಳಿ ಸದಸ್ಯರು

ಶ್ರೀಯುತರಾದ ಪಿ ಸುರೇಶ ಹಂದೆರುಎಸ್ ರತ್ನಾಕರ ನಕ್ಷತ್ರಿಗಳುಹೆಚ್ ಗೋಪಾಲಕೃಷ್ಣ ಐತಾಳರು
ಪಿ ಜಯಕಾರ ಉಪಾಧ್ಯರುಶ್ರೀಧರ ಸೋಮಯಾಜಿಗಳುಕೆ ಎನ್ ನರಸಿಂಹ ಕಾರಂತರು
ಕೆ ವೈ ರಾಘವೇಂದ್ರ ಐತಾಳರುಎಂ ಕೆ ರಮೇಶ್ ಹೊಳ್ಳರುಎಂ ಮಂಜುನಾಥ ಹೊಳ್ಳರು
ಎಂ ಸುಬ್ರಾಯ ಮಯ್ಯರುಕೆ ವಾಸುದೇವ ಮಧ್ಯಸ್ತರುಚಂದ್ರಶೇಖರ ಕಾರಂತರು
ಕೆ ಸತ್ಯನಾರಾಯಣ ಉಪಾಧ್ಯರುಡಾ| ಪಿ ಎಂ ಗಿರಿಧರ ಉಪಾಧ್ಯಾಯರುಕುಳಾಯಿ ವಾಸುದೇವ ಮಯ್ಯರು
ಎಂ ಶ್ರೀಧರ ಕಾರಂತರು  

ಸಭೆಗಳು: ಬೆಂಗಳೂರು ಅಂಗಸಂಸ್ಥೆಗೆ ಅಧೀಕೃತ ಕಛೇರಿ ಬರುವವರೆಗೂ ಹಲವಾರು ಸದಸ್ಯರ ಅಹ್ವಾನದಂತೆ ಅಲ್ಲಲ್ಲಿ ಸಭೆ ಸೇರಿರುತ್ತದೆ. ಉತ್ತಮ ರೀತಿಯ ಉಪಹಾರದ ಆತಿಥ್ಯವನ್ನು ಒದಗಿಸಿ ಸಂಸ್ಥೆಗೆ ಮಹಾದುಪಕಾರವನ್ನು ಮಾಡಿದ ಮಹಾನಿಯರುಗಳೆಂದರೆ ಶ್ರೀಯುತರಾದ ಪಿ ಮಂಜುನಾಥ ಹೇರ್ಳೆರು, ಹೆಚ್ ಸೀತಾರಾಮ ಬಾಸ್ರಿರವರು, ಪಿ ಎಸ್ ಕೃಷ್ಣರಾಯರ ಸ್ವಗೃಹ, ನಾಗೇಂದ್ರ ಹಂದೆಯವರ ಹೋಟೆಲ್ ನಲ್ಲಿ, ಎಂ ಎಸ್ ವೆಂಕಟರಮಣ ಕಾರಂತರ ಅಯ್ಯರ್ ರೆಸ್ಟೋ ರೆಂಟ್ ನಲ್ಲಿ, ಎ ಪಿ ವೈಕುಂಠ ಕಾರಂತರ ಗೀತಾ ರೆಸ್ಟೋರೆಂಟ್ ನಲ್ಲಿ, ಜಿ ಏನ್ ಕೃಷ್ಣಮೂರ್ತಿ ನಾವಡರ ಗಣೇಶ ಭವನದಲ್ಲಿ, ಹೆಚ್ ಜೆ ಆನಂದ ರಾಮ ಹೊಳ್ಳರ ಸ್ವಗೃಹದಲ್ಲಿ.

ಸರ್ವಸದಸ್ಯರ ಸಭೆ / ವಾರ್ಷಿಕ ಸಭೆಗಳು.: ಕೂಟ ಮಹಾಜಗತ್ತು ಬೆಂಗಳೂರು ಅಂಗಸಂಸ್ಥೆಯ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯು ಶ್ರೀ ಗುರುನರಸಿಂಹ ಕಲ್ಯಾಣ ಮಂದಿರದಲ್ಲಿ ನಡೆಯುವ ಮೊದಲು ಈ ಕೆಳಕಂಡ ಸ್ಥಳದಲ್ಲಿಯು ಕೂಡ ಜರುಗಿತು.

  1. ಈಸ್ಟ್ರನ್ ಲಂಚ್ ಹೋಮ್, ಸಿಟಿ ಮಾರ್ಕೆಟ್
  2. ರಾಮಾಂಜೇನೆಯ ದೇವಸ್ಥಾನ (ಕೆ ಆರ್ ಸರ್ಕಲ್)
  3. ವಾಗ್ದೇವಿ ಶೇಷಪ್ಪ ಹಾಲ್ ಹಾಗು ಇತರ ಸ್ಥಳಗಳಲ್ಲಿ.

ಪ್ರಾರಂಭದ ವರ್ಷಗಳಲ್ಲಿ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ದಿನಗಳಲ್ಲಿ ಬೆಳಿಗ್ಗೆ ಗಣಹೋಮ ಕಾರ್ಯಕ್ರಮ ಹಾಗೂ ಅಪರಾಹ್ನ ಸುಮಾರು 3 ಗಂಟೆಗೆ ಅಧಿವೇಶನ ನಡೆಯುತ್ತಿದ್ದುದು ವಿಶೇಷ.

ಸಂಸ್ಥೆಯ ಲೆಕ್ಕ ಪರಿಶೋಧಕರು: ಸಂಸ್ಥೆಯ ಸ್ಥಾಪಿತ ಕಾಲದಿಂದ 1996 -97 ರ ವರೆಗೆ ಶ್ರೀ ಎ ಮಂಜುನಾಥ ಅಲ್ಸೆ,ಬಿ ಎ, ಎಫ್ ಸಿ ಎ ., ಚೆನ್ನೈ, ಉಚಿತವಾಗಿ ಲೆಕ್ಕ ಪರಿಶೋಧಿಸಿ ಕೊಡುತ್ತಿದ್ದರು. ಅನಂತರದ ವರ್ಷಗಳಲ್ಲಿ ಶ್ರೀ ಎ ಎನ್ ಶ್ರೀಧರ ಅಲ್ಸೆಯವರು ಸಂಸ್ಥೆಯ ಲೆಕ್ಕ ಪತ್ರಗಳನ್ನು ಉಚಿತವಾಗಿ ಪರಿಶೋಧಿಸಿ ಕೊಡುತ್ತಾ ಇದ್ದಾರೆ.

ಶ್ರೀ ಗುರುನರಸಿಂಹ ದೇವಸ್ಥಾನದ ಅಭಿವೃದ್ದಿ ಕಾರ್ಯಕ್ರಮ: ಕೂಟ ಮಹಾಜಗತ್ತು ಬೆಂಗಳೂರು ಅಂಗಸಂಸ್ಥೆಯು ಶ್ರೀ ಗುರುನರಸಿಂಹ ದೇವಸ್ಥಾನದ ಅಭಿವೃದ್ದಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಈ ಕೆಳಗಿನ ಕಾರ್ಯಕ್ಕೆ ಧನ ಸಹಾಯ ಮಾಡಿದೆ.

  1. ದೇವಸ್ಥಾನದ ಗರ್ಭಗುಡಿ ಜೀರ್ಣೋದ್ದಾರ ಕಾರ್ಯಕ್ಕೆ ರೂ 1,60,492.96
  2. 2000 ನೇ ಇಸವಿಯಲ್ಲಿ ದೇವಸ್ಥಾನದ ಅಡುಗೆ ಮನೆ ನವೀಕರಣಕ್ಕಾಗಿ ರೂ 1,20,000.00
  3. ಇದುವರೆಗೂ ಸುಮಾರು 20-25 ಲಕ್ಷದಷ್ಟು ಕೊಡುಗೆ ಬೆಂಗಳೂರು ಅಂಗಸಂಸ್ಥೆಯಿಂದ ಸಂದಾಯವಾಗಿದೆ.

ಶ್ರೀ ಗುರುನರಸಿಂಹ ಭಕ್ತ ಮಂಡಳಿಗೆ ಧನ ಸಹಾಯ : ಕೂಟ ಮಹಾಜಗತ್ತು ಬೆಂಗಳೂರು ಅಂಗಸಂಸ್ಥೆಯು ಶ್ರೀ ಗುರುನರಸಿಂಹ ಭಕ್ತ ಮಂಡಳಿ (ರಿ)ಗೆ ವಿಠಲ ನಗರದಲ್ಲಿರುವ ವೈಧಿಕ ಮಂದಿರದ ನಿವೇಶನ ಖರೀದಿಸುವ ಸಮಯದಲ್ಲಿ ಒಂದು ಲಕ್ಷ ರುಪಾಯಿ ನೀಡಿರುತ್ತದೆ (1995 ವಾರ್ಷಿಕ ಸಭೆಯ ವರದಿ ).

ಸಂಸ್ಥೆಯ ಧಾರ್ಮಿಕ ಕಾರ್ಯಕ್ರಮಗಳು:

1 ಶ್ರೀ ಗುರುನರಸಿಂಹ ಜಯಂತಿ:

ನಮ್ಮ ಸಂಸ್ಥೆಯು ಶ್ರೀ ಗುರುನರಸಿಂಹ ಜಯಂತಿಯನ್ನು 1960 ರ ನಂತರ ಆಚರಿಸಲು ಪ್ರಾರಂಭಿಸಿತು. ಪ್ರಾರಂಭದ ವರ್ಷಗಳಲ್ಲಿ ಬೆಳಿಗ್ಗೆ ಕಲಪೋಕ್ತ ಪೂಜೆ, ಪಾರಾಯಣಾದಿಗಳು ನಡೆಸಲ್ಪಟ್ಟವು. ಸಂಜೆ ಉಪನ್ಯಾಸ ಕಾರ್ಯಕ್ರಮಗಳು ನಡೆಯುತ್ತಿದ್ದವು. 1997 ರ ನಂತರ ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆ ಆಯಿತು. ಅಂದರೆ ಬೆಳಿಗ್ಗೆ ಕಲ್ಪೋಕ್ತ ಪೂಜೆ, ವಿಶೇಷ ಚೀಟಿ ಹೊಂದಿದವರ ನಕ್ಷತ್ರ, ಗೋತ್ರ, ಹೆಸರು ಹೇಳಿ ಸಂಕಲ್ಪ ಮಾಡಿಸುವುದು. ತದನಂತರ ಕಲ್ಪೋಕ್ತದಲ್ಲಿ ನರಸಿಂಹ ಅಷ್ಟೋತ್ತರ, ಶತನಾಮಾಭಿಷೇಕ, ವಿಷ್ಣು ಸಹಸ್ರ ನಾಮಾಭಿಷೇಕಗಳನ್ನು ನರಸಿಂಹ ಸಾಲಿಗ್ರಾಮಕ್ಕೆ ಮಾಡಿಸುವುದು. ನಂತರ ಮಂಗಳಾರತಿ, ಮಂತ್ರ ಪುಷ್ಪ, ಮಂತ್ರಾಕ್ಷತೆಗಳನ್ನು ಶ್ರೀ ದೇವರಿಗೆ ಅರ್ಪಿಸುವುದು. ಮಧ್ಯಾಹ್ನ ಅಲ್ಲಿ ನೆರೆದ ಭಕ್ತಾದಿಗಳಿಗೆ ಭೋಜನದ ವ್ಯವಸ್ಥೆ. ಅದೇ ಸಮಯದಲ್ಲಿ ವಿಶೇಷ ಪೂಜೆ ಮಾಡಿಸಿದವರಿಗೆ ಪ್ರಸಾದ ರೂಪದಲ್ಲಿ ಒಂದು ನೆನಪಿನ ಕಾಣಿಕೆ (ಮೋಮೆಂಟೋ), ತೆಂಗಿನ ಕಾಯಿ ಇತ್ಯಾದಿಯನ್ನು ಕೊಡಲಾಗುತ್ತಿತ್ತು. ಸಂಜೆ ಅಷ್ಟಾವಧಾನ ಸೇವೆಯನ್ನು ( 25-05-1988 ರಿಂದ ) ಮಾಡಲಾಗುತ್ತಿತ್ತು. ಮ0ಗ ಳಾರತಿಯ ನಂತರ ಭಕ್ತಾದಿಗಳಿಗೆ ಲಘು ಉಪಾಹಾರದ ವ್ಯವಸ್ಥೆ ಕೂಡ ಮಾಡಲಾಗುತ್ತಿತ್ತು.

1977-80ರ ದಶಕದ ನಡುವೆ ಕೆಲವು ಬಾರಿ ಗುರುನರಸಿಂಹ ಜಯಂತಿ ಹಾಗೂ ಸಾಮೂಹಿಕ ಉಪನಯನ ಒಂದೇ ದಿನ ನಡೆಯುತ್ತಿತ್ತು. ನರಸಿಂಹ ಜಯಂತಿಯ ಕಾರ್ಯಕ್ರಮವು ಶ್ರೀ ಗುರುನರಸಿಂಹ ಕಲ್ಯಾಣ ಮಂದಿರದಲ್ಲಿ ನಡೆಯುವ ಮುನ್ನ ಈ ಕೆಳಕಂಡ ಸ್ಥಳಗಳಲ್ಲಿ ನಡೆಯುತ್ತಿತ್ತು.

ಶ್ರೀ ಲಕ್ಷ್ಮಿನಾರಾಯಣ ಹೊಳ್ಳರ ಮನೆ (1974)

ಅಯ್ಯರ್ ರೆಸ್ಟೋರೆಂಟ್ (1978)

ರಾಮಕೃಷ್ಣ ಲಾಡ್ಜ್ ರಿಸೆಪ್ಶನ್ ಹಾಲ್ (1980) ಹಾಗೂ ಇತ್ಯಾದಿ ಸ್ಥಳಗಳಲ್ಲಿ.

2002 ನೇ ಇಸವಿಯಿಂದ ಶ್ರೀ ಗುರುನರಸಿಂಹ ಜಯಂತಿ ದಿನದಂದು ಮಧ್ಯಾನದ ಊಟದ ಖರ್ಚು ದಿ| ನಾಗಪ್ಪ ಹೇರ್ಳೆ ಮತ್ತು

ಅವರ ಧರ್ಮಪತ್ನಿ ದಿ| ಸಾವಿತ್ರಮ್ಮ ನವರ ಸ್ಮರಣಾರ್ಥ ಅವರ ಮಕ್ಕಳು ಪ್ರಾಯೋಜಿಸುತ್ತಾ ಬಂದಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಅಂದರೆ 1995 ರ ನಂತರ ಮಧ್ಯಾನದ ಊಟದ ನಂತರ ಸಂಜೆ ಸುಮಾರು 5 ಘಂಟೆಯ ವರೆಗೆ ಭಜನೆ/ಹರಿಕಥೆ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಬಂದಿದೆ.

2. ಸಾಮೂಹಿಕ ಉಪನಯನ:

ಪ್ರಾರಂಭದ ವರ್ಷಗಳಲ್ಲಿ ಅಂದರೆ 1953 ರಿಂದ 1974 ರ ವರೆಗೆ ಸಾಮೂಹಿಕ ಉಪನಯನದ ಕಾರ್ಯಕ್ರಮ ನಡೆಸುವ ಬಗ್ಗೆ ಪ್ರಸ್ತಾಪವಾದರೂ, ಪ್ರಪ್ರಥಮವಾಗಿ ಅಂಗಸಂಸ್ಥೆಯು ದಿನಾಂಕ 23-05-1975 ರಿಂದ ಕೂಟ ಬ್ರಾಹ್ಮಣ ವಟುಗಳಿಗೆ ಸಾಮೂಹಿಕ ಉಪನಯನದ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಅಂದು 15 ಜನ ವಟುಗಳಿಗೆ ಬ್ರಮ್ಹೋಪದೇಶವನ್ನು ಕೊಡಿಸಲಾಯಿತು. ಆ ಸಂದರ್ಭದಲ್ಲಿ ಪ್ರತಿ ವಟುವಿಗೆ ಒಂದೊಂದು ಕವಳಿಗೆ ಸೌಟು, ಹರಿವಾಣ, ಉಡಲು ಪಂಚೆ, ಬ್ರಹ್ಮೋಸ್ತ್ರ ಮತ್ತು ಉಪದೇಶ ಸಂದರ್ಭದಲ್ಲಿ ಮುಸುಕು ಹಾಕುವ ಪಂಚೆಗಳನ್ನು ಸಂಸ್ಥೆಯ ಸದಸ್ಯರುಗಳು ಸಂಸ್ಥೆಯ ಪರವಾಗಿ ಉಧಾರವಾಗಿ ಕೊಡುತ್ತಿದ್ದರು.

ಉಪನಯನದ ಕಾಲದಲ್ಲಿ ಈ ಕೆಳಕಂಡ 15 ಮಂದಿ ಪುರೋಹಿತರುಗಳು 15 ಜನ ವಟುಗಳಿಗೆ ಪ್ರತ್ಯೇಕವಾಗಿ ಪೌರೋಹಿತ್ಯವನ್ನು ನಡೆಸಿದರು.

ವೇದಮೂರ್ತಿಗಳಾದ ಮರಿ ಐತಾಳರುನಾರಾಯಣ ಸೋಮಯಾಜಿಗಳು 
ವಿಶ್ವೇಶರ ಐತಾಳರುಗೋಪಾಲ ಐತಾಳರುಗುಂಡು ಉಪಾಧ್ಯರು
ಸೌಕೂರು ವೆಂಕಟರಮಣ ಅಡಿಗಳುಚಂದ್ರ ಐತಾಳರುಯಜ್ಞೇಶ್ವರ ಉಪಾಧ್ಯರು
ಜಿ ಕೃಷ್ಣ ಐತಾಳರುವಿದ್ವಾನ್ ಕೃಷ್ಣ ಉಪಾಧ್ಯರುಲಕ್ಷ್ಮಿನಾರಾಯಣ ಹೊಳ್ಳರು
ಶಂಕರ ನಾರಾಯಣ ಭಟ್ಟರುಸುಬ್ರಮಣ್ಯ ಭಟ್ಟರುಶಂಕರನಾರಾಯಣ ಸೋಮಯಾಜಿಗಳು
ಹಾಗೂ ಪರಮೇಶ್ವರ ಸೋಮಯಾಜಿಗಳು  

ಸಾಮೂಹಿಕ ಉಪನಯನವು 1977 ರಿಂದ 1982 ರ ವರೆಗೆ ಎರಡು ವರ್ಷಕ್ಕೆ ಒಮ್ಮೆ ನಡೆಯುತ್ತಿತ್ತು. ದಿನಾಂಕ 14-08-1982 ರ ಕಾರ್ಯಕಾರಿ ಸಮಿತಿಯ ತೀರ್ಮಾನದಂತೆ ಮುಂದಿನ (1982ರ ನಂತರ) ವರ್ಷಗಳಲ್ಲಿ ಪ್ರತಿವರ್ಷವು ಶ್ರೀ ಗುರುನರಸಿಂಹ ಜಯಂತಿಯ ದಿನದಂದು ಸಾಮೂಹಿಕ ಉಪನಯನಗಳನ್ನು ಏರ್ಪಡಿಸಲು ತೀರ್ಮಾನಿಸಿದರು. ನಂತರ ವರ್ಷಗಳಲ್ಲಿ ಅಂದರೆ 1985 ರಿಂದ (03-05-1985) ಶ್ರೀ ಗುರುನರಸಿಂಹ ಜಯಂತಿ ದಿನದಂದು ಬ್ರಹೋಪದೇಶಕ್ಕೆ ಪ್ರಶಸ್ತವಾದ ದಿನವಲ್ಲದ ಕಾರಣ ಎರಡು ಕಾರ್ಯಕ್ರಮಗಳನ್ನು ಪ್ರತ್ಯೇಕವಾಗಿ ಮಾಡಲಾಯಿತು. ಈ ಕಾರ್ಯಕ್ರಮವು ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷವು ನಡೆದುಕೊಂಡು ಬರುತ್ತಿದೆ.

3.ಸೌರ ಋಗುಪಾಕರ್ಮ

ಸುಮಾರು 1986 ರ ವರೆಗೆ ಸೌರ ಋಗುಪಾಕರ್ಮವು ಈ ಕೆಳಕಂಡ ಸ್ಥಳಗಳಲ್ಲಿ ನಡೆಯುತಿತ್ತು.

ಶ್ರೀ ಯಜ್ನೆಶ್ವರ ಉಪಾಧ್ಯಾಯರ ನೇತ್ರತ್ವದಲ್ಲಿ ಬಳೇಪೇಟೆ ಸರ್ಕಲ್ ಕಾಶಿವಿಶ್ವೇಶ್ವರ ಗುಡಿ ಆವರಣ.

ಶ್ರೀ ಮರಿ ಐತಾಳರ ನೇತ್ರತ್ವದಲ್ಲಿ ಪ್ರಸನ್ನ ಕಲ್ಯಾಣಿ ಆಂಜನೇಯಸ್ವಾಮಿ ದೇವಸ್ಥಾನದ ಆವರಣ ಹಾಗೂ ಎಲ್ಲಾ ಖರ್ಚು ಶ್ರೀ ಮರಿ ಐತಾಳರು ವಹಿಸುತ್ತಿದ್ದರು.

ನಂತರ ವರ್ಷಗಳಲ್ಲಿ ಶ್ರೀ ಗುರುನರಸಿಂಹ ಕಲ್ಯಾಣ ಮಂದಿರದಲ್ಲಿ ನಡೆಸುತ್ತಾ ಬಂದಿದೆ. ಉಪಾಕರ್ಮದ ಖರ್ಚು ನಮ್ಮ ಅಂಗಸಂಸ್ಥೆಯಿಂದ ಮಾಡುತ್ತಿದೆ. ಆದರೆ ಬೆಳೆಗಿನ ಉಪಾಹಾರವನ್ನು ನಮ್ಮ ಸದಸ್ಯರುಗಳು ವಹಿಸಿಕೊಳ್ಳುತ್ತಾ ಬಂದಿದ್ದಾರೆ.

ಸಾಮಾಜಿಕ ಕಾರ್ಯಕ್ರಮಗಳು.

1 ವೈದ್ಯಕೀಯ ತಪಾಸಣೆ :

ಬೆಂಗಳೂರು ಅಂಗಸಂಸ್ಥೆಯು ತನ್ನ ಸದಸ್ಯರಿಗೆ ಅನುಕೂಲವಾಗಲು ಉಚಿತ ವೈದ್ಯಕೀಯ ತಪಾಸಣೆಯನ್ನು 1998,1999 ಹಾಗೂ 2000ನೇ ಇಸವಿಯಲ್ಲಿ ಶ್ರೀ ಗುರುನರಸಿಂಹ ಕಲ್ಯಾಣ ಮಂದಿರದಲ್ಲಿ ಆಯೋಜಿಸಿತ್ತು. ಸುಮಾರು 250 ರಿಂದ 300 ಕೂಟ ಬಂಧುಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದರು. ದಿನಾಂಕ 25-01-1998 ರಲ್ಲಿ ನಡೆದ ತಪಾಸಣಾ ಶಿಬರದ ಅಧ್ಯಕ್ಷತೆಯನ್ನು ಹಿರಿಯ ವೈದ್ಯರಾದ ಡಾ. ಹೆಚ್ ಸದಾಶಿವ ಹಂದೆರು ವಹಿಸಿದ್ದರು. ಅಂದಿನ ಶಿಬಿರದಲ್ಲಿ ಪಾಲ್ಗೊಂಡ ವೈದ್ಯರುಗಳೆಂದರೆ

ಡಾ ಹೆಚ್ ಸದಾಶಿವ ಹಂದೆರುಡಾ. ಪಿ ವಿ ಐತಾಳರುಡಾ. ಪಿ ಎಸ್ ಮಯ್ಯರು
ಡಾ.ಸುರೇಶ ಐತಾಳರುಡಾ.ಪುಷ್ಪಲತಾ ವಿ ಐತಾಳರುಡಾ.ಸುಧಾ ರಮೇಶ್
ಡಾ ಎ ಜನಾರ್ದನ ಕಾರಂತರುಡಾ. ಉದಯ ಕುಮಾರ್ ಮಯ್ಯರುಡಾ ಶ್ರೀಧರ ಹೊಳ್ಳರು
ಡಾ. ಎಂ ಎಸ್ ಕೃಷ್ಣಮೂರ್ತಿ ಹೊಳ್ಳರುಡಾ. ಸಂಪತ್ರವರುಡಾ. ಜಯ ಪ್ರಕಾಶರವರು

ಇವರುಗಳೆಲ್ಲರೂ ಉತ್ಸಾಹದಿಂದ ಸಂತೋಷವಾಗಿ ತುಂಬು ಹೃದಯದಿಂದ ಉಚಿತವಾಗಿ ತಮ್ಮ ತಮ್ಮ ಸಲಕರಣೆಗಳೊಂದಿಗೆ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು.

ಅಂದಿನ ಕಾರ್ಯಕ್ರಮದ ಭೋಜನದ ಪ್ರಾಯೋಜಕತ್ವವನ್ನು ಸಂಸ್ಥೆಯ ಹಿರಿಯ ಸದಸ್ಯರಾದ ಶ್ರೀ ಎ ಪಿ ವೈಕುಂಠ ಕಾರಂತರು ತಮ್ಮ ತಾಯಿಯವರಾದ ಅಕ್ಕಾಣಿಯಮ್ಮನವರ ಸ್ಮರಣಾರ್ಥ ಏಪರ್ಡಿಸಿದ್ದರು.

2. ವಧು ವರಾನ್ವೆಷಣಾ ಮಾಹಿತಿ ಕೇಂದ್ರ :

ಸದಸ್ಯರು ಸೂಚಿಸಿದ ವಧು – ವರರ ಸಂಘಟನಾ ಕೇಂದ್ರ, ವಿದ್ಯಾರ್ಥಿ ನಿಲಯ, ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ಸಲಹೆಗಳು ಕಾರ್ಯರೂಪಕ್ಕೆ ತರಲು (ಸದಸ್ಯರ ಪ್ರೋತ್ಸಾಹದ ಅಭಾವದಿಂದ) ಸಾಧ್ಯವಾಗಲಿಲ್ಲ. ಆದರೆ 2005-06 ರಲ್ಲಿ ಸಂಸ್ಥೆಯು ಕೂಟ ಭಾಂದವರ ಅನುಕೂಲಕ್ಕಾಗಿ ವಧು – ವರಾನ್ವೇಷಣಾ ಮಾಹಿತಿ ಕೇಂದ್ರವನ್ನು ಪ್ರಾರಂಭಿಸಿತು.

ದಿನಾಂಕ 17-07-2013 ರಂದು ನಮ್ಮ ಸಂಸ್ಥೆಯಿಂದ ವಧು ವರರ ಮುಖಾಮುಖಿ ಭೇಟಿ ಎಂಬ ಹೊಸ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಸುಮಾರು ೩೦೦ ಜನ ವಧು ವರ, ಅವರ ತಂದೆ, ತಾಯಿ ಹಾಗು ಪೋಷಕರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

3. ಸಂಸ್ಥೆಯ ವೆಬ್ ಸೈಟ್ ಹಾಗೂ ಇ – ಮೇಲ್ :

ನಮ್ಮ ಅಂಗ ಸಂಸ್ಥೆಯು ತನ್ನದೇ ಆದ ವೆಬ್ ಸೈಟ್ ಹಾಗೂ ಇ – ಮೇಲ್ ನ್ನು ಸಂಸ್ಥೆಯ ಸರ್ವತೋಮುಖ ಅಭಿವೃಧಿಗಾಗಿಯೂ, ಸದಸ್ಯರ ಮತ್ತು ಸಮಾಜ ಭಾಂದವರ ಹಾಗೂ ಇತರ ಸಂಘ ಸಂಸ್ಥೆಗಳ ಅನುಕೂಲಕ್ಕಾಗಿಯೂ ದಿನಾಂಕ 22-12-2013 ರಂದು ಚಾಲನೆ ನೀಡಿತು. ಇದೊಂದು ಪ್ರಗತಿಪರ ದಿಸೆಯಲ್ಲಿಟ್ಟ “ದಿಟ್ಟ ಹೆಜ್ಜೆ: ಸಂಸ್ಥೆಯ ವೆಬ್ ಸೈಟ್ ವಿವರ:

Website: www.kmjbangalore.com
Email: secretary@kmjbangalore.com


4.” ಪ್ರತಿಭಾ ಪುರಸ್ಕಾರ ಹಾಗೂ “ನರಸಿಂಹ ಪ್ರಶಸ್ತಿ”

1995-96 ರಿಂದ ನಮ್ಮ ಸಂಸ್ಥೆಯಿಂದ ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯರನ್ನು ಗುರುತಿಸಿ ಸನ್ಮಾನಿಸುವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಅಂತಯೇ ಮೊದಲನೇ ವರ್ಷ ಅಂದರೆ 1995 ರಲ್ಲಿ ನಮ್ಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಹಿರಿಯರನ್ನು ಗೌರವಿಸಲಾಯಿತು. ಆ ಮಹಾನಿಯರೆಂದರೆ

ಶ್ರೀಯುತರಾದ ಹೆಚ್ ಸೀತಾರಾಮ ಬಾಸ್ರಿಯವರುಹೆಚ್ ಜೆ ಆನಂದ ರಾಮ ಹೊಳ್ಳರು
ಎ ಪಿ ವೈಕುಂಠ ಕಾರಂತರು ಹಾಗೂಪಿ ಹೆಚ್ ಉಪಾಧ್ಯರು

1995 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ತಲಾ ಎರಡು ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.

1996 ರಲ್ಲಿ “ನರಸಿಂಹ ಪ್ರಶಸ್ತಿ ” ಎಂಬ ಬಿರುದನ್ನು ಕೊಡಲು ತಿರ್ಮಾನಿಸಿತು.

1996-97 ರಲ್ಲಿ ಮೊದಲನೇ ಬಾರಿಗೆ ಈ ಪ್ರಶಸ್ತಿಯನ್ನು ಸ್ವೀಕರಸಿದವರೆಂದರೆ

ಶ್ರೀಯುತರಾದ ಮಾಲತಿ ಹೊಳ್ಳ (ಕ್ರೀಡೆ)ವೆ||ಮೂ|ಯಜ್ಞೇಶ್ವರ ಉಪಾಧ್ಯರು (ಪೌರೋಹಿತ್ಯ)
ಪರಮೇಶ್ವರ ಉಪಾಧ್ಯರು (ಹೋಟೆಲ್ ಉದ್ಯಮಿ)ಹಾಗೂ ಶ್ರೀನಿವಾಸ ಹೆಬ್ಬಾರರು (ಕಲೆ)

1996 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ತಲಾ 01 ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.

1997 ರಲ್ಲಿ “ನರಸಿಂಹ ಪ್ರಶಸ್ತಿ” ಪಡೆದವರೆಂದರೆ ಶ್ರೀಯುತರಾದ

ವೆ||ಮೂ|| ಜಿ ಚಂದ್ರಶೇಖರ ಐತಾಳರು (ಪೌರೋಹಿತ್ಯ)ವೆ||ಮೂ||ಜಿ ಕೃಷ್ಣಮೂರ್ತಿ ಉಪಾಧ್ಯರು (ಪೌರೋಹಿತ್ಯ)
ಡಾ|| ಹೆಚ್ ಸದಾಶಿವ ಹಂದೆರು (ವೈಧ್ಯಕೀಯ )ಎ ಮಂಜುನಾಥ ಅಲ್ಸೇರು (ಸಮಾಜ ಸೇವೆ)
ಕಟಿಲ್ ಗಣಪತಿ ಶರ್ಮರು (ಸಮಾಜ ಸೇವೆ)ಕೆ ಏನ್ ಯಜ್ಞನಾರಾಯಣ ಹೇರ್ಳೆರು (ಹೋಟೆಲ್ ಉಧ್ಯಮಿ)
ಹಾಗೂ ಜಿ. ನರಸಿಂಹ ಭಟ್ಟರು (ಪಾಕಶಾಸ್ತ್ರ) 

1997 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಹೆಚ್ಚು ಅಂಕ ಗಳಿಸಿದ ಎಸ್ ಎಸ್ ಎಲ್ ಸಿ ಗೆ 5, ಪಿ ಯು ಸಿ ಗೆ 3, ಬಿ ಎಸ್ ಗೆ 1 ಬಿ ಇ ಗೆ 1, ಹಾಗೂ ಎಂ ಎಸ್ ಗೆ 1 ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.

1998 ರಲ್ಲಿ “ನರಸಿಂಹ ಪ್ರಶಸ್ತಿ” ಪಡದವರೆಂದರೆ ಶ್ರೀಯುತರಾದ

ವೆ||ಮೂ|| ಕೆ ನಾರಾಯಣ ಸೋಮಾಯಾಜಿ (ಪೌರೋಹಿತ್ಯ)ಡಾ|| ವಿ ಕೃಷ್ಣಮೂರ್ತಿ ಮಯ್ಯರು (ವೈಧ್ಯಕೀಯ)
ಪ್ರೋ|| ಎಂ ಆರ್ ಹೊಳ್ಳರು (ಶಿಕ್ಷಣ)ಕೊಡೇರಿ ನಾರಾಯಣ ಕಾರಂತರು (ಹೋಟೆಲ್ ಉಧ್ಯಮಿ)
ಹಾಗೂ ಎಸ್ ರಾಮಚಂದ್ರ (ಕಲೆ/ ಸಿನಿಮಾ) 

1998 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಹೆಚ್ಚು ಅಂಕ ಗಳಿಸಿದ ಏಳನೇ ತರಗತಿ 5 ಎಸ್ ಎಸ್ ಎಲ್ ಸಿ ಗೆ 4, ಪಿ ಯು ಸಿ ಗೆ 4 ಹಾಗೂ ಪದವಿಧರರಾದ 5 ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.

1999 ರಲ್ಲಿ “ನರಸಿಂಹ ಪ್ರಶಸ್ತಿ ಪಡದವರೆಂದರೆ ಶ್ರೀಯುತರಾದ

ವೆ||ಮೂ||ಕೆ ಮಂಜುನಾಥ ಶರ್ಮರು (ಪೌರೋಹಿತ್ಯ)ಬಿ ವಿ ಕಾರಂತರು (ಕಲೆ)
ಡಾ||ಪಿ ಶ್ರೀನಿವಾಸ ಮಯ್ಯ (ವೈಧ್ಯಕೀಯ)ಪ್ರೋ||ವಿ ಶಿವರಾಮ ಹೊಳ್ಳರು (ವಿಜ್ಞಾನ)
ಕೆ ಪರಮೇಶ್ವರ ತುಂಗರು (ಕೈಗಾರಿಕೆ)ಹಾಗೂಎ ನರಸಿಂಹ ಅಲ್ಸೆ (ಜ್ಯೋತಿರ್ವಿಜ್ಞಾನ)

1999 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಹೆಚ್ಚು ಅಂಕ ಗಳಿಸಿದ ಏಳನೇ ತರಗತಿ ಗೆ 8, ಎಸ್ ಎಸ್ ಎಲ್ ಸಿ ಗೆ 5, ಪಿ ಯು ಸಿ ಗೆ 4 ಹಾಗೂ ಪದವಿಧರರಾದ 5 ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.

2000 ರಲ್ಲಿ “ನರಸಿಂಹ ಪ್ರಶಸ್ತಿ” ಪಡೆದವರೆಂದರೆ ಶ್ರೀ ಯುತರಾದ

ವೆ||ಮೂ||ಹಲಸಿನ ಕಟ್ಟೆ ಸದಾಶಿವ ಐತಾಳರು (ಪೌರೋಹಿತ್ಯ)ಬಿ ಪದ್ಮನಾಭ ಹೊಳ್ಳರು (ನ್ಯಾಯಾಂಗ)
ಬಿ ನಾರಾಯಣ ರಾವ್ (ಶಿಕ್ಷಣ)ಡಾ||ಸಿ ಶ್ರೀನಿವಾಸ ಸೋಮಾಯಾಜಿ (ವೈಧ್ಯಕೀಯ/ ಆಯುರ್ವೇದ)
ಐ ಎನ್ ಕೃಷ್ಣ ಮಧ್ಯಸ್ತರು (ಹೋಟೆಲ್ ಉಧ್ಯಮಿ)ಪಿ ಸದಾನಂದ ಮಯ್ಯರು (ಕೈಗಾರಿಕೆ)
ಕೆ ಸಂಜೀವ ಕಾರಂತರು (ಪಾಕಶಾಸ್ತ್ರ) ಹಾಗೂಸಿ ಮಹಾಬಲೇಶ್ವರ ಮಧ್ಯಸ್ತರು (ಕ್ರೀಡೆ)

2000 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಹೆಚ್ಚು ಅಂಕ ಗಳಿಸಿದ ಏಳನೇ ತರಗತಿ ಗೆ 9 ಎಸ್ ಎಸ್ ಎಲ್ ಸಿ ಗೆ 11, ಹಾಗೂ ಪಿ ಯು ಸಿ ಗೆ 5 ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.

2001 ರಲ್ಲಿ “ನರಸಿಂಹ ಪ್ರಶಸ್ತಿ” ಪಡೆದವರೆಂದರೆ ಶ್ರೀಯುತರಾದ

ಸತ್ಯಮೂರ್ತಿ ಹೊಳ್ಳರು (ನ್ಯಾಯಾಂಗ)ಪಿ ಶ್ರೀಧರ ಉಪಾಧ್ಯರು (ಶಿಕ್ಷಣ)
ಡಾ|| ಪಿ ಪದ್ಮನಾಭ ಮಯ್ಯರು (ವೈದ್ಯಕೀಯ)ಉಷಾ ಗಣೇಶನ್ (ಸರ್ಕಾರಿ ಸೇವೆ)
ಹೆಚ್ ಗಣಪಯ್ಯ ಹಂದೆರು (ಹೋಟೆಲ್ ಉಧ್ಯಮಿ)ಗಣೇಶ ಸೋಮಾಯಾಜಿ (ಕೈಗಾರಿಕೆ)
ಪಿ ಚಂದ್ರಶೇಖರ ಉಪಾಧ್ಯರು (ಪತ್ರಿಕೋದ್ಯಮ)ಕೊಡೇರಿ ಮಹಾದೇವ ಕಾರಂತರು (ಕಲೆ/ಯಕ್ಷಗಾನ)
ಲೆ.ಕರ್ನಲ್. ಬಲರಾಮ ಐತಾಳರು (ರಕ್ಷಣೆ)ಎನ್ ವಿ ಕೃಷ್ಣ ರಾವ್ (ಜ್ಯೋತಿರ್ವಿಜ್ಞಾನ)

2001 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಹೆಚ್ಚು ಅಂಕ ಗಳಿಸಿದ ಏಳನೇ ತರಗತಿ ಗೆ 09 ಎಸ್ ಎಸ್ ಎಲ್ ಸಿ ಗೆ 09, ಹಾಗೂ ಪಿ ಯು ಸಿ ಗೆ 8 ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.

2002 ರಲ್ಲಿ “ನರಸಿಂಹ ಪ್ರಶಸ್ತಿ” ಪಡೆದವರೆಂದರೆ ಶ್ರೀಯುತರಾದ

ವೆ||ಮೂ|ಕೆ ಸುಬ್ರಾಯ ಐತಾಳರು (ಪೌರೋಹಿತ್ಯ)ಕೆ ಶ್ರೀನಿವಾಸ ಉಪಾಧ್ಯರು (ನ್ಯಾಯಾಂಗ)
ಹೆಚ್ ಪಿ ಹಂದೆರವರು (ರಕ್ಷಣೆ)ಕೆ ಯಜ್ಞನಾರಾಯಣ ಹೇರ್ಳೆರವರು (ಕೈಗಾರಿಕೆ)
ಡಾ|| ಎ ಜೆ ಕಾರಂತರು (ವೈದ್ಯಕೀಯ)ಕೆ ಎಸ ಸೀತಾರಾಮ ಕಾರಂತರು (ಕಲೆ)

2002 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಹೆಚ್ಚು ಅಂಕ ಗಳಿಸಿದ ಏಳನೇ ತರಗತಿ ಗೆ 10, ಎಸ್ ಎಸ್ ಎಲ್ ಸಿ ಗೆ 11, ಹಾಗೂ ಪಿ ಯು ಸಿ ಗೆ 9 ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.

2003 ರಲ್ಲಿ “ನರಸಿಂಹ ಪ್ರಶಸ್ತಿ” ಪಡೆದವರೆಂದರೆ ಶ್ರೀ ಯುತರಾದ

ವೆ||ಮೂ||ಪಿ ಉಪೇಂದ್ರ ಐತಾಳರು (ಪೌರೋಹಿತ್ಯ)ಕೆ ವಿ ರಾಮಕೃಷ್ಣ ಹೊಳ್ಳರು(ಹೋಟೆಲ್ ಉಧ್ಯಮಿ)
ಜಿ ಕೃಷ್ಣ ರಾವ್ (ಪತ್ರಕರ್ತರು)ದಯಾನಂದ ಕಾರಂತರು (ಸರ್ಕಾರಿ ಸೇವೆ)
ಡಾ|| ಎನ್ ಆರ್ ಮೋಹನ್ ಹೊಳ್ಳರು (ವೈದ್ಯಕೀಯ)ಶ್ರೀಮತಿ ಕೆ ವಿಜಯಲಕ್ಷ್ಮಿ ದೇವಿ (ಶಿಕ್ಷಣ)

2003 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಹೆಚ್ಚು ಅಂಕ ಗಳಿಸಿದ ಏಳನೇ ತರಗತಿ ಗೆ 11,ಎಸ್ ಎಸ್ ಎಲ್ ಸಿ ಗೆ 10, ಹಾಗೂ ಪಿ ಯು ಸಿ ಗೆ 09 ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.

 

2004 ರಲ್ಲಿ “ನರಸಿಂಹ ಪ್ರಶಸ್ತಿ” ಪಡೆದವರೆಂದರೆ ಶ್ರೀಯುತರಾದ

ವೆ||ಮೂ|| ಗುಂಡ್ಮಿ ಶ್ರಿಕಂಠ ಉಪಾಧ್ಯರು (ಪೌರೋಹಿತ್ಯ)ಐರೋಡಿ ಸೀತಾರಾಮ ಕಾರಂತರು (ಹೋಟೆಲ್ ಉಧ್ಯಮಿ)
ಗಿಳಿಯಾರು ಯಜ್ಞನಾರಾಯಣ ಐತಾಳರು (ಪಾಕ ಶಾಸ್ತ್ರ)ಕೆ ಉಪೇಂದ್ರ ಐತಾಳರು (ಸಾಹಿತಿ/ಕಲಾವಿದ)
ಡಾ|| ಪಿ ಸೂರ್ಯನಾರಾಯಣ ಉಪಾಧ್ಯರು (ವೈಧ್ಯಕೀಯ) 

2004 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಹೆಚ್ಚು ಅಂಕ ಗಳಿಸಿದ ಎಸ್ ಎಸ್ ಎಲ್ ಸಿ ಗೆ 15, ಹಾಗೂ ಪಿ ಯು ಸಿ ಗೆ 16 ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.

2005 ರಲ್ಲಿ “ನರಸಿಂಹ ಪ್ರಶಸ್ತಿ” ಪಡೆದವರೆಂದರೆ ಶ್ರೀಯುತರಾದ

ಪದ್ಮಭೂಷಣ ಡಾ|| ಎನ್ ಶೇಷ ಗಿರಿಯವರು (ಸರ್ಕಾರಿ ಸೇವೆ)ಪಿ ವಾಸುದೇವ ಮಯ್ಯರು (ಬ್ಯಾಂಕಿಂಗ್)
ಡಾ|| ವಿ ಪರಮೇಶ್ವರ್ ರವರು (ವೈದ್ಯಕೀಯ)ಹೆಚ್ ಅನಂತ ಐತಾಳರು (ಹೋಟೆಲ್ ಉಧ್ಯಮಿ)
ಹೆಚ್ ಶ್ರೀದರ್ ಹಂದೆರು (ಕಲೆ)ಕೆ ಆನಂದ ಐತಾಳರು (ಪಾಕ ಶಾಸ್ತ್ರ)

2005 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಹೆಚ್ಚು ಅಂಕ ಗಳಿಸಿದ ಎಸ್ ಎಸ್ ಎಲ್ ಸಿ ಗೆ 15, ಹಾಗೂ ಪಿ ಯು ಸಿ ಗೆ 15 ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.

2006 ರಲ್ಲಿ “ನರಸಿಂಹ ಪ್ರಶಸ್ತಿ” ಪಡೆದವರೆಂದರೆ ಶ್ರೀಯುತರಾದ

ಕೆ ಉದಯ ಹೊಳ್ಳರು (ನ್ಯಾಯಾಂಗ)ಪಿ ರಾಮಕೃಷ್ಣ ಉಪಾಧ್ಯರು (ಪತ್ರಕರ್ತರು)
ಡಾ|| ಕೆ ವೈ ಪ್ರಭಾಕರ ಸೋಮಾಯಾಜಿಯವರು(ವೈದ್ಯಕೀಯ)ಕೆ ಮೋಹನ್ ಹೊಳ್ಳರು (ಯಕ್ಷಗಾನ/ಕಲೆ)
ಬಿ ರಘುನಾಧ ಸೋಮಾಯಾಜಿಗಳು (ಕೈಗಾರಿಕೆ)ಗಣಪತಿ ಮಹಾಬಲೇಶ್ವರ ಶಾಸ್ತ್ರಿಗಳು (ಆಗಮವೇದ ಪಂಡಿತರು)
ಪಿ ರಾಮಚಂದ್ರ ಐತಾಳರು (ಕ್ರೀಡೆ) ಹಾಗೂಎ ಎಸ್ ನರಸಿಂಹಮೂರ್ತಿ ಕಾರಂತರು (ಹೋಟೆಲ್ ಉಧ್ಯಮಿ)

2006 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಹೆಚ್ಚು ಅಂಕ ಗಳಿಸಿದ ಎಸ್ ಎಸ್ ಎಲ್ ಸಿ ಗೆ 15, ಹಾಗೂ ಪಿ ಯು ಸಿ ಗೆ 15 ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.

2007 ರಲ್ಲಿ “ನರಸಿಂಹ ಪ್ರಶಸ್ತಿ” ಪಡೆದವರೆಂದರೆ ಶ್ರೀಯುತರಾದ

ಡಾ|| ಸಿ ಆನಂದರಾಮ ಉಪಾಧ್ಯರು (ಯಕ್ಷಗಾನ)ಡಾ|| ವೆಂಕಟರಮಣ ಹೊಳ್ಳರು (ಆಯೂರ್ವೇದ)
ಕೆ ಜನಾರ್ಧನ ಹೊಳ್ಳರು (ಸಮಾಜ ಸೇವೆ)(ನಿವೃತ)ವಿಂಗ್ ಕಮಾಂಡರ್ ಶ್ರೀನಿವಾಸ ಹಂದೆರು ಜ್ಯೋತಿಷ್ಯ)
ಎ ಜೆ ಹೊಳ್ಳರು (ವಕೀಲರು)ಐ ಎನ ಮಹಾಬಲ ಮಧ್ಯಸ್ಥರು (ಹೋಟೆಲ್ ಉಧ್ಯಮಿ)

2007 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಹೆಚ್ಚು ಅಂಕ ಗಳಿಸಿದ ಎಸ್ ಎಸ್ ಎಲ್ ಸಿ ಗೆ 15, ಹಾಗೂ ಪಿ ಯು ಸಿ ಗೆ 13 ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.


2008 ರಲ್ಲಿ “ನರಸಿಂಹ ಪ್ರಶಸ್ತಿ” ಪಡೆದವರೆಂದರೆ ಶ್ರೀಯುತರಾದ

ಡಾ|| ಹೆಚ್ ನಾಗರಾಜ ಕಾರಂತರು – ವಿಜ್ಞಾನರಾಜೇಂದ್ರ ಕಾರಂತರು -ಕಲೆ
ಹರಿಕೃಷ್ಣ ಎಸ್ ಹೊಳ್ಳರು – ಟ್ರೇಡ್ ಮಾರ್ಕ್ ಸಲಹೆಗಾರರು ವಕೀಲರುವೆ||ಮೂ||ಅನಂತ ಪದ್ಮನಾಭ ಉಪಾಧ್ಯರು -ಪೌರೋಹಿತ್ಯ

2008 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಹೆಚ್ಚು ಅಂಕ ಗಳಿಸಿದ ಎಸ್ ಎಸ್ ಎಲ್ ಸಿ ಗೆ 15, ಹಾಗೂ ಪಿ ಯು ಸಿ ಗೆ 15 ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.

2009 ರಲ್ಲಿ “ನರಸಿಂಹ ಪ್ರಶಸ್ತಿ” ಪಡೆದವರೆಂದರೆ ಶ್ರೀಯುತರಾದ 

ಡಾ||ಪ್ರಭಾವತಿ – ವೈಧ್ಯಕೀಯಕೆ ರಾಧಾಕೃಷ್ಣ ಹೊಳ್ಳರು –ನ್ಯಾಯಾಂಗ
ಪಿ ರಾಮಚಂದ್ರ ಐತಾಳರು – ಹೋಟೆಲ್ ಉಧ್ಯಮಿ ಹಾಗೂ ಸಮಾಜ ಸೇವೆ 
 

2009 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಹೆಚ್ಚು ಅಂಕ ಗಳಿಸಿದ ಎಸ್ ಎಸ್ ಎಲ್ ಸಿ ಗೆ 14, ಹಾಗೂ ಪಿ ಯು ಸಿ ಗೆ 13 ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.

2010 ರಲ್ಲಿ “ನರಸಿಂಹ ಪ್ರಶಸ್ತಿ” ಪಡೆದವರೆಂದರೆ ಶ್ರೀಯುತರಾದ

  1. ಡಾ|| ವಿಷ್ಣುಮೂರ್ತಿ ಐತಾಳರು – ವೈಧ್ಯಕೀಯ
  2. ಡಾ|| ಕೆ ರಾಜಗೋಪಾಲ ಹೊಳ್ಳರು – ಸಮಾಜ ಸೇವೆ
  3. ಪಿ ಮಂಟಪ ಪ್ರಭಾಕರ ಉಪಾಧ್ಯರು – ಯಕ್ಷಗಾನ
  4. ವಿ ಲಕ್ಷ್ಮಿನಾರಾಯಣ ಹೊಳ್ಳರು – ಪೌರೋಹಿತ್ಯ
  5. ಸು.ವಿ ಮೂರ್ತಿ ಹೇರ್ಳೆರವರು – ವ್ಯಂಗ್ಯ ಚಿತ್ರಕಾರರು/ಕಲೆ

2010 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಹೆಚ್ಚು ಅಂಕ ಗಳಿಸಿದ ಎಸ್ ಎಸ್ ಎಲ್ ಸಿ ಗೆ 15, ಹಾಗೂ ಪಿ ಯು ಸಿ ಗೆ 15 ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.

2011 ರಲ್ಲಿ “ನರಸಿಂಹ ಪ್ರಶಸ್ತಿ” ಪಡೆದವರೆಂದರೆ ಶ್ರೀಯುತರಾದ

  1. ವೆ||ಮೂ|| ಅನಂತ ಪದ್ಮನಾಭ ಐತಾಳರು – ಪೌರೋಹಿತ್ಯ
  2. ಪಿ ನರಸಿಂಹ ಐತಾಳರು – ರಾಜ್ಯೋತ್ಸವ ಪ್ರಶಸ್ತಿ ವಿಜೇತರು
  3. ಡಾ|| ಅರುಂಧತಿ ಎಂ ಹೇರ್ಳೆ ರವರು – ವೈಧ್ಯಕೀಯ

2011 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಹೆಚ್ಚು ಅಂಕ ಗಳಿಸಿದ ಎಸ್ ಎಸ್ ಎಲ್ ಸಿ ಗೆ 15, ಹಾಗೂ ಪಿ ಯು ಸಿ ಗೆ 15 ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.

2012 ರಲ್ಲಿ “ನರಸಿಂಹ ಪ್ರಶಸ್ತಿ” ಪಡೆದವರೆಂದರೆ ಶ್ರೀಯುತರಾದ

  1. ಕೆ ಸುಬ್ರಹ್ಮಣ್ಯ ಕಾರಂತರು – ಕಲೆ
  2. ಎನ್ ಸೀತಾರಾಂ – ವಿಜ್ಞಾನ
  3. ಬಿ ಸದಾಶಿವ ರಾವ್ ರವರು – ಸರ್ಕಾರಿ ಸೇವೆ
  4. ಎಂ ಕೆ ಮಹಾಬಲ ಹೊಳ್ಳರು – ಹೋಟೆಲ್ ಉಧ್ಯಮಿ
  5. ಕೆ ಎನ್ ರಾಘವೇಂದ್ರ ಹೇರ್ಳೆರವರು – ಕೈಗಾರಿಕೆ

2012 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಹೆಚ್ಚು ಅಂಕ ಗಳಿಸಿದ ಎಸ್ ಎಸ್ ಎಲ್ ಸಿ ಗೆ 15, ಹಾಗೂ ಪಿ ಯು ಸಿ ಗೆ 15 ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.

2013 ರಲ್ಲಿ “ನರಸಿಂಹ ಪ್ರಶಸ್ತಿ” ಪಡೆದವರೆಂದರೆ ಶ್ರೀಯುತರಾದ

  1. ಕೆ ಹೆಚ್ ಶಿವಸ್ವಾಮಿ ಐತಾಳರು – ಬ್ಯಾಂಕಿಂಗ್
  2. ಡಾ|| ಎ ಗೋಪಾಲಕೃಷ್ಣ ಕಾರಂತರು – ಶಿಕ್ಷಣ
  3. ಎಂ ಎ ಅರವಿಂದ ಹೊಳ್ಳರು – ರಂಗಭೂಮಿ/ಚಲನಚಿತ್ರ
  4. ಕೆ ಜಯಲಕ್ಷ್ಮಿ ಹೇರ್ಳೆರವರು – ಸಮಾಜಸೇವೆ /ಹೋಟೆಲ್ ಉಧ್ಯಮಿ
  5. ಕೃಷ್ಣಮೂರ್ತಿ ತುಂಗರು – ಕಲೆ/ಯಕ್ಷಗಾನ

2013 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಹೆಚ್ಚು ಅಂಕ ಗಳಿಸಿದ ಎಸ್ ಎಸ್ ಎಲ್ ಸಿ ಗೆ 15, ಹಾಗೂ ಪಿ ಯು ಸಿ ಗೆ 16 ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.

2014 ರಲ್ಲಿ “ನರಸಿಂಹ ಪ್ರಶಸ್ತಿ” ಪಡೆದವರೆಂದರೆ ಶ್ರೀಯುತರಾದ

  1. ವೇ||ಮೂ||ಶ್ರೀ ವೆಂಕಪ್ಪಯ್ಯ ಭಟ್ಟರು – ಪೌರೋಹಿತ್ವ
  2. ಶ್ರೀಧರ ಎಸ್ ಹೊಳ್ಳ – ಹೋಟೆಲ್ ಉದ್ಯಮ
  3. ಬ್ರಿಗೇಡಿಯರ್ ಹೆಚ್. ಭಕ್ತವತ್ಸಲ ಹಂದೆ – ರಕ್ಷಣೆ
  4. ಎಂ ಎಸ್ ಜನಾರ್ಧನ ಕಾರಂತ – ಸಮಾಜ ಸೇವೆ
  5. ಕೆ. ಶಂಕರ ನಾರಾಯಣ ಉಪಾಧ್ಯ – ಶಿಕ್ಷಣ

2015 ರಲ್ಲಿ “ನರಸಿಂಹ ಪ್ರಶಸ್ತಿ” ಪಡೆದವರೆಂದರೆ ಶ್ರೀಯುತರಾದ

  1. ಶ್ರೀ ಕೆ.ವೆಂಕಟರಮಣ ಮಯ್ಯರು – ಹೋಟೆಲ್ ಉದ್ಯಮ
  2. ಶ್ರೀ ಬಿ.ಎಂ.ರಾಮ ಕಾರಂತರು – ಪಾಕ ಶಾಸ್ತ್ರ
  3. ಶ್ರೀ ನಾಗಪ್ಪಯ್ಯ ತುಂಗರು – ಕೈಗಾರಿಕೆ ಉದ್ಯಮ
    ಡಾ|| ಪುಷ್ಪಲತಾ.ವಿ. ಐತಾಳ – ವೈದ್ಯಕೀಯ
  4. ಶ್ರೀಮತಿ ಹಂದಟ್ಟು ಜಾನಕಿ ಹಂದೆ – ಸಮಾಜ ಸೇವೆ

2016 ರಲ್ಲಿ “ನರಸಿಂಹ ಪ್ರಶಸ್ತಿ” ಪಡೆದವರು ಶ್ರೀಯುತರಾದ

  1. ಶ್ರೀ ಪಿ . ಜಯರಾಮ ಭಟ್ – ಬ್ಯಾಂಕಿಂಗ್
  2. ಶ್ರೀ ಕೆ. ಚಕ್ರಪಾಣಿ ನಾವಡ – ವಿಜ್ಞಾನ
  3. ಶ್ರೀ ಸಿ . ಸುರೇಶ ತುಂಗ – ಶಿಕ್ಷಣ
  4. ಶ್ರೀ ರಮೇಶ ಕಾರಂತ – ಹೋಟೆಲ್ ಉದ್ಯಮ
  5. ಶ್ರೀ ಜಿ . ರಾಘವೇಂದ್ರ ಮಯ್ಯ – ಕಲೆ
  6. ಶ್ರೀಮತಿ ವಿದ್ಯಾ ಜಯರಾಮ ಐತಾಳ – ಸಮಾಜ ಸೇವೆ

2017 ರಲ್ಲಿ “ನರಸಿಂಹ ಪ್ರಶಸ್ತಿ” ಪಡೆದವರೆಂದರೆ ಶ್ರೀಯುತರಾದ

  1. ಶ್ರೀ ಪಿ.ವಿ. ಕೃಷ್ಣದೇವ ಹೇರಳೆ – ಹೋಟೆಲ್ ಉದ್ಯಮ
  2. ಶ್ರೀ ಕೆ. ನಾಗಭೂಷಣ ಉರಾಳ – ಮಾಹಿತಿ ತಂತ್ರಜ್ಞಾನ
  3. ಡಾ || ಜೋಶಿ ವೆಂಕಟೇಶ ಕಾರಂತ – ವೈದ್ಯಕೀಯ
  4. ಶ್ರೀ ಸಿ. ನರಸಿಂಹ ಮಧ್ಯಸ್ಥ – ಪಾಕಶಾಸ್ತ್ರ
  5. ಶ್ರೀ ಪಿ. ಜನಾರ್ಧನ ಭಟ್ಟ – ಕಲೆ
  6. ಡಾ || ಪಿ. ಸುರೇಂದ್ರ ಉಪಾಧ್ಯ – ಜ್ಯೋತಿಷ್ಯ ಶಾಸ್ತ್ರ

2018 ರಲ್ಲಿ “ನರಸಿಂಹ ಪ್ರಶಸ್ತಿ” ಪಡೆದವರೆಂದರೆ ಶ್ರೀಯುತರಾದ

  1. ಪಿ. ಎನ್. ಶ್ರೀಪತಿ ಬಾಯರಿ – ಹೋಟೆಲ್ ಉದ್ಯಮ
  2. ಗುಂಡ್ಮಿ ಸದಾನಂದ ಐತಾಳ – ಕಲೆ – ಯಕ್ಷಗಾನ
  3. ಪಿ. ಕೆ. ಶಿವ ಶಂಕರ ಹೇರ್ಳೆ – ಸರ್ಕಾರಿ ಸೇವೆ
  4. ಡಾಕ್ಟರ್ ಪ್ರಕಾಶ್ ಹೊಳ್ಳ – ವೈದ್ಯಕೀಯ
  5. ಹೆಚ್. ಪರಮೇಶ್ವರ ಬಾಸ್ರಿ – ಸಮಾಜ ಸೇವೆ
  6. ಕೆ. ರಾಧಾಕೃಷ್ಣ ಹೊಳ್ಳ – ಸಂಘಟನೆ, ಉದ್ಯಮ ಹಾಗೂ ಸಾರ್ವಜನಿಕ ಸೇವೆ

2018 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಹೆಚ್ಚು ಅಂಕ ಗಳಿಸಿದ ಎಸ್ ಎಸ್ ಎಲ್ ಸಿ ಗೆ 15, ಹಾಗೂ ಪಿ ಯು ಸಿ ಗೆ 16 ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.

2019 ರಲ್ಲಿ “ನರಸಿಂಹ ಪ್ರಶಸ್ತಿ” ಪಡೆದವರೆಂದರೆ ಶ್ರೀಯುತರಾದ

  • ಶ್ರೀ ಮಹಾಬಲೇಶ್ವರ ಎಂ ಎಸ್                 ಹಣಕಾಸು
  • ಪ್ರೊ ಎಸ್.ಶ್ರೀನಿವಾಸ ಅಡಿಗ                  ಪೌರೋಹಿತ್ಯ ಮತ್ತು ಜ್ಯೋತಿಷ್ಯ
  • C.A ಎ.ಎನ್ ಶ್ರೀಧರ  ಅಲ್ಸೆ                  ಸಮಾಜ ಸೇವೆ
  • ಶ್ರೀಮತಿ ಕೃಷ್ಣವೇಣಿ ತುಂಗಾ                 ಹೋಟೆಲ್ ಉದ್ಯಮ
  • ಶ್ರೀ ಕೆ.ಸೂರ್ಯನಾರಾಯಣ ಐತಾಳ         ಕ್ರೀಡೆ
2019 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಹೆಚ್ಚು ಅಂಕ ಗಳಿಸಿದ ಎಸ್ ಎಸ್ ಎಲ್ ಸಿ ಗೆ 15, ಹಾಗೂ ಪಿ ಯು ಸಿ ಗೆ 15 ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.
 
2020 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಹೆಚ್ಚು ಅಂಕ ಗಳಿಸಿದ ಎಸ್ ಎಸ್ ಎಲ್ ಸಿ ಗೆ 15, ಹಾಗೂ ಪಿ ಯು ಸಿ ಗೆ 15 ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.
 
2021 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಹೆಚ್ಚು ಅಂಕ ಗಳಿಸಿದ ಎಸ್ ಎಸ್ ಎಲ್ ಸಿ ಗೆ 16, ಹಾಗೂ ಪಿ ಯು ಸಿ ಗೆ 14 ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.
  
2022 ರಲ್ಲಿ “ನರಸಿಂಹ ಪ್ರಶಸ್ತಿ” ಪಡೆದವರೆಂದರೆ ಶ್ರೀಯುತರಾದ
  • ಡಾ|| ಶಂಕರನಾರಾಯಣ ಉರಾಳ ಹೆಚ್             ಗ್ರಾಮೀಣ ವೈದ್ಯಕೀಯ ಸೇವೆ
  • ಪ್ರೊ|| ಕೆ.ನರಸಿಂಹ ನಕ್ಷತ್ರಿ                              ಶಿಕ್ಷಣ
  • ಶ್ರೀ ಎ.ವಿ ಮಹಾಬಲೇಶ್ವರ ತುಂಗ                     ಸಮಾಜ ಸೇವೆ
  • ಶ್ರೀ ಕೆ.ಆರ್ ವಾಸುದೇವ ಕಾರಂತ                     ಹೋಟೆಲ್ ಉದ್ಯಮ
  • ಶ್ರೀ ಗುಂಡಿ ಗಣಪಯ್ಯ ಹೊಳ್ಳ                             ಪೌರೋಹಿತ್ಯ
  • ಶ್ರೀ ಯು.ಚಂದ್ರಶೇಖರ ನಾವಡ                         ಪಾಕಶಾಸ್ತ್ರ
2022 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಹೆಚ್ಚು ಅಂಕ ಗಳಿಸಿದ ಎಸ್ ಎಸ್ ಎಲ್ ಸಿ ಗೆ 15, ಹಾಗೂ ಪಿ ಯು ಸಿ ಗೆ 15 ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.
 
 2023 ರಲ್ಲಿ “ನರಸಿಂಹ ಪ್ರಶಸ್ತಿ” ಪಡೆದವರೆಂದರೆ ಶ್ರೀಯುತರಾದ
  • ಶ್ರೀಮತಿ ಕಲಾವತಿ ಜಿ. ಕೆ ಹೊಳ್ಳ                     ಶಿಕ್ಷಣ ಮತ್ತು ಸಾಹಿತ್ಯ
  • ಶ್ರೀ ಗಿಳಿಯಾರು ಮಂಜುನಾಥ ಮಯ್ಯ             ಸಮಾಜಸೇವೆ
  • ಶ್ರೀ ಐರೋಡಿ ರಾಮದಾಸ  ಕಾರಂತ              ಹೋಟೆಲ್ ಉದ್ಯ
  • ಶ್ರೀ ಕಲ್ಮಾಡಿ ವಿಶ್ವನಾಥ ಐತಾಳ                     ಕೈಗಾರಿಕೋದ್ಯಮ
  • ಶ್ರೀ ಬಿ.ವಿ ಗಿರೀಶ್ ಹೊಳ್ಳ                             ಸರಕಾರಿ ಸೇವೆ
  • ಶ್ರೀ ಹಂದಟ್ಟು ಜನಾರ್ಧನ ಹಂದೆ                     ಕಲೆ
2023 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಹೆಚ್ಚು ಅಂಕ ಗಳಿಸಿದ ಎಸ್ ಎಸ್ ಎಲ್ ಸಿ ಗೆ 16, ಹಾಗೂ ಪಿ ಯು ಸಿ ಗೆ 15 ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.
 
2024 ರಲ್ಲಿ “ನರಸಿಂಹ ಪ್ರಶಸ್ತಿ” ಪಡೆದವರೆಂದರೆ ಶ್ರೀಯುತರಾದ
  • ಶ್ರೀಮತಿ ಸುನಂದ ಉಪಾಧ್ಯ         ಶಿಕ್ಷಣ
  • ಡಾ||ಉದಯಶಂಕರ ಮಯ್ಯ         ವೈದ್ಯಕೀಯ
  • ಡಾ||ರಾಧಾಕೃಷ್ಣ   ಉರಾಳ         ಕಲೆ ಮತ್ತು ಯಕ್ಷಗಾನ
  • ಶ್ರೀ ಕೆ.ಕೃಷ್ಣ ಉರಾಳ                 ಹೋಟೆಲ್ ಉದ್ಯಮ
  • ಕರ್ನಲ್ ಎಂ.ರಮೇಶ್ ಮಯ್ಯ         ರಕ್ಷಣೆ
  • ವೇ||ಬ್ರ||ಶ್ರೀ ಪಿ.ಜನಾರ್ದನ ಅಡಿಗ     ಪುರೋಹಿತ್ಯ

2024 ರಲ್ಲಿ ಪ್ರತಿಭಾ ಪುರಸ್ಕಾರವನ್ನು ಹೆಚ್ಚು ಅಂಕ ಗಳಿಸಿದ ಎಸ್ ಎಸ್ ಎಲ್ ಸಿ ಗೆ 15, ಹಾಗೂ ಪಿ ಯು ಸಿ ಗೆ 15 ಸದಸ್ಯರ ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು.


ಸಾಂಸ್ಕೃತಿಕ ಕಾರ್ಯಕ್ರಮಗಳು

ಪ್ರತಿಭಾವಂತ ಮಕ್ಕಳಿಂದ ದೇವರನಾಮ ಕಂಠ ಪಾಠ ಸ್ಪರ್ದೆ (ಶ್ರೀ ಗುರುನರಸಿಂಹ ಜಯಂತಿ ದಿನ – 1985 ರಿಂದ 1995 ರವರಗೆ), ನೃತ್ಯ, ಸಂಗೀತ ಕಾರ್ಯಕ್ರಮಗಳು ನಮ್ಮ ಸಂಸ್ಥೆಯು ನಡೆಸುತ್ತಾ ಬಂದಿದೆ. ನಗೆ ಹಬ್ಬ, ಹರಿಕಥೆ ಹಾಗೂ ಯಕ್ಷಗಾನ ಕಾರ್ಯಕ್ರಮಗಳು ಶ್ರೀ ಗುರುನರಸಿಂಹ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರದ ನಂತರ ಮತ್ತು ಶ್ರೀ ಗುರುನರಸಿಂಹ ಜಯಂತಿ ದಿನ ಮಧ್ಯಾಹ್ನ ಸಮಯದಲ್ಲಿ ಹಮ್ಮಿ ಕೊಳ್ಳುತ್ತಾ ಬಂದಿದೆ.  

ಅಂಕಿ ಅಂಶ ಸಂಗ್ರಹಣೆಪಿ ಸತ್ಯನಾರಾಯಣ ಉಪಾಧ್ಯರು ಮತ್ತು ಹೆಚ್ ಗೋಪಾಲಕೃಷ್ಣ ಐತಾಳರು.
ಕರಡು ಪ್ರತಿ ತಯಾರಿಸಿದವರುಪಿ ಸತ್ಯನಾರಾಯಣ ಉಪಾಧ್ಯರು.

ಪರಿಶೋಧಿಸಿದವರು ಹಾಗೂ ಮೇಲ್ವಿಚಾರಕರು: ಕೆ ನಾಗೇಶ ಹೊಳ್ಳರು.